LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

RCB ಕಪ್ ಗೆದ್ದರೆ ರಜೆ ಘೋಷಿಸಲು ಸಿಎಂ ಸಿದ್ದರಾಮಯ್ಯಗೆ ಅಭಿಮಾನಿ ಪತ್ರ

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಒಮ್ಮೆಯೂ ಕಪ್ ಗೆದ್ದುಕೊಂಡಿಲ್ಲ. ಗುರುವಾರ ನಡೆದ ಕ್ವಾಲಿಫೈ-1ರ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದು 8 ವರ್ಷಗಳ ಬಳಿಕ ಫನಲ್ ತುಲುಪಿದೆ. ಹೀಗಾಗಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಇದರ ನಡುವೆ ಬೆಳಗಾವಿ ಜಿಲ್ಲೆ ಗೋಕಾಕ್ ಮೂಲದ ಅಭಿಮಾನಿಯೊಬ್ಬ, ಆರ್ ಸಿಬಿ ಕಪ್ ಗೆದ್ದರೆ ಅಂದು ರಜೆ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾನೆ.

ಶಿವಾನಂದ ಮಲ್ಲನವರ್ ಅನ್ನೋ ಯುವಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಆರ್ ಸಿಬಿ ಫೈನಲ್ ಪಂದ್ಯದಲ್ಲಿ ಕಪ್ ಗೆದ್ದರೆ ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್ ಸಿಬಿ ಫ್ಯಾನ್ಸ್ ಹಬ್ಬ’ ಎಂದು ಆಚರಿಸಲು ರಜೆ ಘೋಷಿಸಬೇಕು. ಏಕೆಂದರೆ  ಆರ್ ಸಿಬಿ ಫ್ಯಾನ್ಸ್ ಗಳ ಬಹುದಿನದ ಕನಸು ನನಸಾಗಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರತಿ ಜಿಲ್ಲೆಯಲ್ಲಿ ಆಚರಿಸುವಂತೆ ಆರ್ ಸಿಬಿ ಫ್ಯಾನ್ಸ್ ಹಬ್ಬ ಆಚರಿಸಲು ಸರ್ಕಾರ ಅನವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಬರೆದಿದ್ದಾನೆ. ಇದು ಸಾಕಷ್ಟು ವೈರಲ್ ಆಗಿದೆ. ಕೆಲವರು ಜೈ ಎಂದರೆ ಮತ್ತೆ ಕೆಲವರು ಯುವಕನ ನಡೆಯನ್ನು ಟೀಕಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST