LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕೋಡಿಯಲ್ಲಿ ಅದ್ಧೂರಿ ಮಹಾವೀರ ಜಯಂತಿ

ಪ್ರಜಾಸ್ತ್ರ ಸುದ್ದಿ

ಚಿಕ್ಕೋಡಿ(Chikkodi): ಪಟ್ಟಣದಲ್ಲಿ ಸೋಮವಾರ ಭಗವಾನ್ ಮಹಾವೀರ ಜನ್ಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಜೊತೆಗೆ ಜೈನ್ ಪೇಟೆಯ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಭಿಷೇಕ ಮಾಡಲಾಯಿತು. ಭಗವಾನ ಮಾಹಾವೀರ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ, ಗುರುವಾರ ಪೇಟೆ, ಕೆ.ಸಿ.ರಸ್ತೆ, ಎನ್.ಎಮ್ ರಸ್ತೆ ಮೂಲಕ ಮಹಾವೀರ ನಗರದ ಶಾಂತಿನಾಥ ಮಂದಿರಕ್ಕೆ ತಲುಪಿ, ಅಲ್ಲಿ ಪೂಜೆ ಸಲ್ಲಿಸಿ ಮರಳಿ ಸ್ವೇತಾಂಬರ ಮಂದಿರ, ಹೊಸಪೇಟ ಗಲ್ಲಿಯ ಮಂದಿರ ಮೂಲಕ ಜೈನ ಪೇಟದ ಮಂದಿರಕ್ಕೆ ಸೇರಲಾಯಿತು.

ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯ ವೇಳೆ ತೊಟ್ಟಿಲು ಕಾರ್ಯಕ್ರಮ ಸೇರಿದಂತೆ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ  ವರ್ಧಮಾನ ಸದಲಗೆ, ಡಾ.ಸಂಜಯ ಪಾಟೀಲ, ಶೀತಲ ಹಜಾರೆ, ಚಂದ್ರಕಾಂತ ಹುಕ್ಕೇರಿ, ರಾಮಚಂದ್ರ ಜೌಗುಲೆ, ಅನೀಲ ಸದಲಗೆ, ಡಾ.ಪದ್ಮರಾಜ ಪಾಟೀಲ, ಬಾಹುಬಲಿ ನಸಲಾಪೂರೆ, ರಾಜು ರೋಖಡೆ, ಪ್ರಕಾಶ ಅಲಗಣ್ಣವರ, ಮಹೇಂದ್ರಕುಮಾರ ಶಹಾ, ಅಮಿತ ಶಹಾ, ಅನುಪ ಶಹಾ, ರಾವಸಾಹೇಬ ಕೇಸ್ತಿ, ಎಸ್.ಟಿ.ಮುನ್ನೋಳಿ, ಬಿ.ಬಿ.ಹಜಾರೆ, ಸಂಕೇತ ಮೆಹತಾ, ಶಿರೀಶ ಮೆಹತಾ ಸೇರಿದಂತೆ ನೂರಾರು ಜನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST