ಪ್ರಜಾಸ್ತ್ರ ಸುದ್ದಿ
ಯಾದಗಿರಿ(Yadagiri): ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರ ಮುಂಜಾನೆ ಭಾರಿ ಮಳೆಯಾಗಿದೆ. ಯಾದಗಿರಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಸಿಡಿಲಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶಹಪೂರ ತಾಲೂಕಿನ ರೋಜಾ ಗ್ರಾಮದ ತೌಕಲ್ ಪಟೇಲ್(42) ಅನ್ನೋ ವ್ಯಕ್ತಿ ಮೃತಪಟ್ಟಿದ್ದಾರೆ. ಮುಂಜಾನೆ ಹೊಲಕ್ಕೆ ಹೋಗಿದ್ದರು. ಮಳೆ ಬಂದಾಗ ಮರದ ಕೆಳಗೆ ನಿಂತಿದ್ದು, ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಇನ್ನು ಯರಗೋಳ ಗ್ರಾಮದಲ್ಲಿ ಸಿಡಿಲಿಗೆ ಜಾನುವಾರು ಮೃತಪಟ್ಟಿದೆ. ತಾಲೂಕಿನ ವಿವಿಧ ಕಡೆ ಮನೆಗಳಿಗೆ ಹಾನಿಯಾಗಿವೆ. ನಗರದ ಹಲವು ರಸ್ತೆಗಳು ನೀರಿನಿಂದ ತುಂಬಿಕೊಂಡಿವೆ. ಚರಂಡಿ ತುಂಬಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿವೆ. ರೈಲ್ವೆ ಸ್ಟೇಷನ್ ರಸ್ತೆ, ಆರ್ ಟಿಒ ಕಚೇರಿ ಮುಂಭಾಗದ ರಸ್ತೆ, ಸಿಪಿಐ ಕಚೇರಿ ಮುಂದಿನ ರಸ್ತೆ ಸೇರಿದಂತೆ ಹಲವು ಕಡೆ ನೀರು ತುಂಬಿಕೊಂಡಿದ್ದು, ಸಾರ್ವಜನಿಕರು ಪರದಾಟ ನಡೆಸಿದ್ದಾರೆ.



