LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್, ಮುನಿರತ್ನ ವಿರುದ್ಧ ಸಂತ್ರಸ್ತೆ ಬಾಂಬ್

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿ, ಅವರಿಗೆ ಕಿರುಕುಳ ಕೊಟ್ಟು ಸಚಿವ ಸ್ಥಾನವನ್ನು ಮುನಿರತ್ನ ಪಡೆದಿದ್ದರು ಎಂದು ಸಂತ್ರಸ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಹಿಳೆ, ನನಗೆ ಭದ್ರತೆ ನೀಡಿದರೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರು ಬಹಿರಂಗ ಪಡಿಸುತ್ತೇನೆ. ಮಾಧ್ಯಮಗಳ ಬಳಿಯೂ ಇರದೆ ಇರುವ ಅಡ್ವಾನ್ಸ್ ಕ್ಯಾಮೆರಾಗಳು ಮುನಿರತ್ನ ಬಳಿಯಿವೆ. ಮಾಜಿ ಸಿಎಂ, ಮಾಜಿ ಸಚಿವರು, ಸಚಿವರು, ಶಾಸಕರ ವಿಡಿಯೋಗಳಿವೆ. ಸಹಾಯ ಕೇಳಿಕೊಂಡು ಹೋಗುವ ನಮ್ಮಂತವರನ್ನು ಬಳಿಸಿಕೊಂಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಎಸಿಪಿ, ಸಿಪಿಐ ಅಧಿಕಾರಿಗಳನ್ನು ಸಹ ಹನಿಟ್ರ್ಯಾಪ್(Honey Trap) ಮಾಡಿಸಿದ್ದಾರೆ. ನನ್ನ ಹಾಗೂ ಮುನಿರತ್ನ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಅವರಿಗೆ ಸವಾಲು ಹಾಕಿದ್ದಾರೆ. ಇನ್ನು ಹನಿಟ್ರ್ಯಾಪ್ ಗೆ ನನ್ನನ್ನು ಬಳಸಿಕೊಂಡಿಲ್ಲ. ಬೇರೆ ಮಹಿಳೆಯರಿದ್ದಾರೆ. ಇದರಲ್ಲಿ ನಟಿಯರಿಲ್ಲ. ಐದಾರು ಮಹಿಳೆಯರನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಅವರು ನನ್ನಂತೆ ಹೊರ ಬಂದು ಸತ್ಯ ಹೇಳಲಿ ಎಂದು ಅತ್ಯಾಚಾರ ಆರೋಪದ ಸಂತ್ರಸ್ತೆ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST