LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂದಿನ ಒಂದು ವರ್ಷದಲ್ಲಿ ಬಂಜಾರ ಭವನ ನಿರ್ಮಾಣ: ವಿಜಯಾನಂದ ಕಾಶಪ್ಪನವರ

ಪ್ರಜಾಸ್ತ್ರ ಸುದ್ದಿ

ಇಲಕಲ್(Ilakal): ಸಂತ ಸೇವಾಲಾಲ್ ಮಹಾರಾಜ ಸಮಾಜದ ಒಳಿತ ಬಯಸಿ ಶಾಂತಿಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು, ಸಂತ ಸೇವಾಲಾಲ ಮಹಾರಾಜರು ಸಮಾಜ ಸುಧಾರಣೆಗೆ, ಸಮಾನತೆಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ ಮಹನೀಯರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದ ಕಂಠಿ ವೃತ್ತದಲ್ಲಿ ತಾಲೂಕಾಡಳಿತ ನೇತೃತ್ವದಲ್ಲಿ ಬಂಜಾರ ಸೇವಾ ಸಂಘದ ಸಂಯೋಗದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲಕಲ್ ನಗರದ ಬಂಜಾರ ಸಮುದಾಯ ಬೇಡಿಕೆಯನ್ನು ಹಂತ ಹಂತವಾಗಿ ನಿಭಾಯಿಸಿದ್ದೇನೆ. ತಮ್ಮ ಬೇಡಿಕೆಯಂತೆ ಸೇವಾಲಾಲ್ ವೃತ್ತ ಕೂಡಾ ನಿರ್ಮಾಣವಾಗಿದೆ. ಹಾಗೇ ದೇವಸ್ಥಾನಕ್ಕೆ‌ ನಿವೇಶನ ಕೂಡಾ ಒದಗಿಸಲಾಗಿದೆ. ಮುಂದೆ ಒಂದು ವರ್ಷದಲ್ಲಿ ಸೇವಾಲಾಲ್ ದೇವಸ್ಥಾನ ಹಾಗೂ ಬಂಜಾರ ಭವನ ಸರಕಾರದ ಅನುದಾನ ಮಂಜೂರು ಮಾಡಿಸಿ ತಮ್ಮ ಬೇಡಿಕೆ ಕೂಡಾ ನಿಭಾಯಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಲಕಲ್ ನಗರದಲ್ಲಿ ನಿರ್ಮಾಣ ಆಗುತ್ತಿರುವ ಕ್ರೀಡಾಂಗಣಕ್ಕೆ ಸೇವಾಲಾಲ್ ನಾಮಕರಣ ಬೇಡಿಕೆ ಪ್ರಸ್ತಾಪಿಸಿದ್ದು, ಸಮುದಾಯದ ಅಧ್ಯಕ್ಷರ ಜೊತೆ ಚರ್ಚಿಸಿ ಆ ಬೇಡಿಕೆ ಕೂಡಾ ನಿಭಾಯಿಸುತ್ತೇನೆ ಎಂದರು.

ತಹಶೀಲ್ದಾರ್ ಅಮರೇಶ ಪಮ್ಮಾರ ಮಾತನಾಡಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ, ಸವಹಾರ್ದತೆ ಮತ್ತು ನೈತಿಕ ಮೌಲಗಳನ್ನು ಬೆಳೆಸುವ ಅಗತ್ಯ ಬಂಜಾರ ಸಮುದಾಯಕ್ಕೆ ಇದೆ ಎಂದು ಹೇಳಿದರು. ಬಂಜಾರ ಸಮುದಾಯ ಹಿರಿಯ ಮುಖಂಡ ಬಂಜಾರ ಸೇವಾ ಸಂಘದ ಬಾಗಲಕೋಟ ‌ಜಿಲ್ಲಾ ಉಪಾಧ್ಯಕ್ಷ ಹಣಮಂತಪ್ಪ ರಾಠೋಡ ‌ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಕುಮಾರ ಮಹಾರಾಜ ‌ಮಾತನಾಡಿ, ಸಮುದಾಯ ಭಾಷೆ, ಭೂಷಣ, ಸಂಸ್ಕೃತಿ, ಪರಂಪರೆ, ಉಡುಗೆ ತೊಡುಗೆ, ಕಾಶ್ಮೀರದಿಂದ ಕನ್ಯಾಕುಮಾರಿವರಗೆ, ಒಂದೇ ಭಾಷೆ ಒಂದು ವೇಷ ಭೂಷಣ ಒಟ್ಟಿನಲ್ಲಿ ಒಂದೇ ಒಂದು ಸಂಸ್ಕೃತಿ ಹೊಂದುವ ಸಮುದಾಯ ಬಂಜಾರ ಸಮುದಾಯ, ಸೇವಾಲಾಲರು ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು, ತಮ್ಮ ಜನಾಂಗದ ಸೇವೆಯನ್ನು ಮಾಡಿದ ಮಹಾನ್‌ ಹಿತಚಿಂತಕರು ಎಂದರು.

ಈ ವೇಳೆ ಬಂಜಾರ ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ಹಣಮಂತಪ್ಪ ರಾಠೋಡ, ತಾಲೂಕ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ದೇಶಪಾಂಡೆ, ವಿಠ್ಠಲ ಲಚಮಪ್ಪ ಚವ್ಹಾಣ, ಮುತ್ತು ಜಾಧವ, ಶಂಕರ ಮಹಾರಾಜ, ಸಂತೋಷ ಮಹಾರಾಜ, ರೇಖಪ್ಪ ಕಾರಬಾರಿ, ಅಂಬರೇಶ ನಾಯಕ, ವಾಸು ರಾಠೋಡ, ದೊಡ್ಡಪ್ಪ ಚವ್ಹಾಣ, ದೊಡ್ಡಪ್ಪ ಕಾರಬಾರಿ, ಬದ್ರಪ್ಪ ಚವ್ಹಾಣ, ಶರಣಪ್ಪ ರಾಠೋಡ, ವಿಠ್ಠಲ ಚವ್ಹಾಣ, ವಿಜಯಮಹಾಂತೇಶ ರಾಠೋಡ ಸೇರಿದಂತೆ ಅನೇಕ‌ ಮಹನಿಯರ ಉಪಸ್ಥಿತರಿದ್ದರು. ವಿಷ್ಣು ರಜಪೂತ ನಿರೂಪಸಿದರು, ಪರಶುರಾಮ ಪಮ್ಮಾರ ವಂದಿಸಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST