LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಜನ ನಾಯಗನ್’ ಬಿಡುಗಡೆ: ಅಭಿಮಾನಿಗಳ ಹರ್ಷೋದ್ಗಾರ

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ತಮಿಳುನಾಡು ಮುಖ್ಯಮಂತ್ರಿ, ನಟ ಜೋಸೆಫ್ ವಿಜಯ್ ಅವರ ಸಿನಿ ಕರಿಯರ್ ನ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23ರಂದು ಎಲ್ಲೆಡೆ ಬಿಡುಗಡೆಯಾಗಿದೆ. ಮುಂಜಾನೆಯಿಂದಲೇ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಥಿಯೇಟರ್ ಮುಂದೆ ಜಮಾಯಿಸಿ ಸಂಭ್ರಮಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ನೋಡಿ ಕುಣಿಯುತ್ತಿದ್ದಾರೆ.

ನಟನಾಗಿ ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗಿದೆ. ಹೀಗಾಗಿ ಫ್ಯಾನ್ಸ್ ಕಣ್ಣೀರು ಹಾಕಿದ್ದಾರೆ. ಇನ್ನು ಟೈಟಲ್ ಕಾರ್ಡ್ ವಿಡಿಯೋ ಸಖತ್ ವೈರಲ್ ಆಗಿದೆ. ಇಳಯ ದಳಪತಿಯಿಂದ ಮುಖ್ಯಮಂತ್ರಿ ಪದವಿವರೆಗಿನ ಜರ್ನಿಯನ್ನು ತೋರಿಸಲಾಗಿದೆ. ಎಚ್.ವಿನೋದ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗಿನಲ್ಲಿಯೂ ಸಿನಿಮಾ ಬಿಡುಗಡೆಯಾಗಿದೆ. ವಿಜಯಗೆ ಜೋಡಿಯಾಗಿ ಮಮಿತಾ ಬೈಜು, ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

ನಟ ವಿಜಯ್ ಮಾಸ್ ಹೀರೋ ಆಗಿ ಮಿಂಚಬೇಕೆಂದು 1994ರಲ್ಲಿ ಇವರ ತಂದೆ ಖ್ಯಾತ ನಿರ್ದೇಶಕ ಎಸ್.ಎ ಚಂದ್ರಶೇಖರ್ ಅವರು ಇಳಯ ದಳಪತಿ(ಯುವ ನಾಯಕ) ಎಂದು ಬಿರುದು ನೀಡಿದರು. 2017ರಲ್ಲಿ ಮೆರ್ಸಲ್ ಚಿತ್ರದಲ್ಲಿ ನಿರ್ದೇಶಕ ಅಟ್ಲಿ ಇಳಯ ತೆಗೆದು ದಳಪತಿ ಎಂದು ಮಾತ್ರ ಬಳಸಿದರು. ಅಲ್ಲಿಂದ ಮುಖ್ಯಮಂತ್ರಿ ಗಾದಿವರೆಗಿನ ಕ್ಷಣಗಳನ್ನು ಚಿತ್ರದ ಮೊದಲಾರ್ಧ ಮುಗಿದ ಬಳಿಕ ತೋರಿಸಿದ್ದು ನೋಡುಗರಿಗೆ ಕಿಕ್ ನೀಡಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST