LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಾಕ್ ಪಡೆಯನ್ನು ಬಗ್ಗುಬಡೆದ ಕೌರ್ ಟೀಂ

ಪ್ರಜಾಸ್ತ್ರ ಸುದ್ದಿ

ದುಬೈ(Dubai): ಮಹಿಳಾ ಏಷ್ಯಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿ ಆಗಿದ್ದವು. ಟಾಸ್ ಗೆದ್ದ ಪಾಕಿಸ್ತಾನದ ನಾಯಕಿ ಪಾತಿಮಾ ಸನಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇವರ ಲೆಕ್ಕಾಚಾರವನ್ನು ಸಂಪೂರ್ಣವಾಗಿ ತಲೆ ಕೆಳಗಾಗುವಂತೆ ಮಾಡಿದ್ದು ಭಾರತ ತಂಡದ ಬೌಲರ್ ಗಳು.

ಶ್ರೀಚರಣಿ, ಪ್ರೇಮಾ ರಾವತ್, ದೀಪ್ತಿ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ಪಾಕಿಸ್ತಾನ ತಂಡ 18.1 ಓವರ್ ಗಳಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗಿದೆ. ಮುನೀಬಾ ಅಲಿ 13, ಶಹ್ವಾಲ್ ಜುಲ್ಫಿಕರ್ 14, ಗುಲ್ ಫ್ರೆಝೊ 0, ಆಯೇಷಾ ಜಾಫರ್ 2, ಸದಾಫ್ ಶಮ್ಸಾ 3, ನಾಯಕಿ ಪಾತಿಮಾ ಸನಾ 0, ಏಮಾನ್ ಫಾತಿಮಾ 5, ಉಮ್ಮೆ ಹನಿ 6, ತುಬಾ ಹಸನ್ 9, ನಶರಾ ಸಂದು 0 ರನ್ ಗೆ ಔಟ್ ಆಗಿದ್ದಾರೆ.

ಭಾರತ ತಂಡದ ಶ್ರೀಚರಣಿ 4 ಓವರ್ ಗಳಲ್ಲಿ 7 ರನ್ ಗೆ 3 ವಿಕೆಟ್, ಪ್ರೇಮಾ ರಾವತ್ 4 ಓವರ್ ಗಳಲ್ಲಿ 9 ರನ್ ಗೆ 3 ವಿಕೆಟ್, ದೀಪ್ತಿ ಶರ್ಮಾ 3.1 ಓವರ್ ಗಳಲ್ಲಿ 5 ರನ್ ಗೆ 2 ವಿಕೆಟ್ ಪಡೆಯುವ ಮೂಲಕ ಪಾಕ್ ತಂಡವನ್ನು ಕೇವಲ 55 ರನ್ ಗಳಿಗೆ ಕಟ್ಟಿ ಹಾಕಿದರು. ಅಲ್ಪ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 8.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶಫಾಲಿ ವರ್ಮಾ 12, ಸ್ಮೃತಿ ಮಂದಾನಾ 9, ಪ್ರತಿಕಾ ರೌಲ್ 4 ರನ್ ಗಳಿಸಿದರು. ನಾಯಕ ಹರ್ಮನ್ ಪ್ರೀತ್ ಕೌರ್ ಅಜೇಯ 18, ದೀಪ್ತಿ ಶರ್ಮಾ ಅಜೇಯ 12 ರನ್ ಗಳಿಸಿದರು. ನಾಯಕಿ ಪಾತಿಮಾ ಸನಾ 3 ವಿಕೆಟ್ ಪಡೆದು ಮಿಂಚಿದರು. ಶ್ರೀಚರಣಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST