LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೋಲಗೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಗೋಲಗೇರಿ ಗ್ರಾಮದ ತಳವಾರ ಸಮಾಜದ ಸಮುದಾಯ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಗುರುವಾರ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಳವಾರ ಸಮಾಜದ ಮುಖಂಡ ಮಡಿವಾಳ ನಾಯ್ಕೋಡಿ, ಮಹರ್ಷಿ ವಾಲ್ಮೀಕಿಯವರ ಆದರ್ಶ ಜೀವನ ನಮಗೆ ಪ್ರೇರಣೆಯಾಗಬೇಕು. ವಿಶ್ವಕ್ಕೆ ಮಾದರಿಯಾದ ರಾಮಾಯಣ ಎನ್ನುವ ಮಹಾಗ್ರಂಥವನ್ನು ನೀಡಿದ್ದಾರೆ. ಆದಿಕವಿ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಳವಾರ ಸಮಾಜದ ಮುಖಂಡರಾದ ಮಲ್ಲಣ್ಣ ನಾಯಕವಾಡಿ(ಬೆಂಗಳೂರು), ಗ್ರಾಮ ಪಂಚಾಯತಿ ಸದಸ್ಯರಾದ ಈರಪ್ಪ ಕೋಟೆಗೋಳ, ಬಸವರಾಜ ತಳವಾರ, ನಿಂಗಪ್ಪ ನಾಯ್ಕೋಡಿ, ಭಾಗಣ್ಣ ಕೋಟೆಗೋಳ, ಗೋಲ್ಲಾಳಪ್ಪ ನಾಯ್ಕೋಡಿ, ಮಹಾಂತೇಶ ನಾಯ್ಕೋಡಿ, ಗೋಲ್ಲಾಳ ತಳವಾರ, ರಾಜು ಯಂಕಂಚಿ, ಸಿದ್ದಪ್ಪ ತಳವಾರ, ಸಂಜು ನಾಯ್ಕೋಡಿ, ವಿರೇಶ ನಾಯ್ಕೋಡಿ, ಯಮನಪ್ಪ ನಾಯ್ಕೋಡಿ, ರಾವುತಪ್ಪ ಮಾಗಣಗೇರಿ, ಬಸಪ್ಪ ನಾಯ್ಕೋಡಿ, ಭೀಮಪ್ಪ ನಾಯ್ಕೋಡಿ, ಗ್ರಾಮ ಪಂಚಾಯತಿ ಸದಸ್ಯರಾದ ಮೈಬೂಬ ಜೋಗುರ, ಇಸ್ಮಾಯಿಲ್ ಚೌಧರಿ, ಮಹಿಬೂಬ ಚೌಧರಿ, ಮಂಜುನಾಥ ಕೆರಕನಳ್ಳಿ, ವಿರೇಶ ನಾಯ್ಕೋಡಿ, ಮಲ್ಲು ನಾಯ್ಕೋಡಿ ಸೇರಿದಂತೆ ಇತರರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST