ಪ್ರಜಾಸ್ತ್ರ ಸುದ್ದಿ
ಉತ್ತರ ಕನ್ನಡ(Uttara Kannada): ಭಟ್ಕಳದ ವೆಂಕಟಾಪುರದ ಜಾಗಟೆಬೈಲ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೇವರ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆಯನ್ನು ಭಾನುವಾರ ಹಿಂದೂ ಜಾಗರಣೆ ವೇದಿಕೆಯವರು ಹಾಗೂ ಸ್ಥಳೀಯರು ನಿರ್ಮಿಸಿದ್ದಾರೆ. ಸಂಜೆ ಮುಸ್ಲಿಂ ಸಮುದಾಯದವರು ತೆರವುಗೊಳಿಸಿದ್ದಾರೆ. ಇದರಿಂದಾಗಿ ಭಾನುವಾರ ಗಲಾಟೆ ನಡೆದಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಕಾಮಗಾರಿ ಶುರುವಾದಾಗ ಮುರಿನಕಟ್ಟೆ ಜಾಗ ತೆರವುಗೊಳಿಸಲಾಗಿತ್ತು. ಇದನ್ನು ಮರುಸ್ಥಾಪನೆ ಮಾಡಿಕೊಡಬೇಕು ಎಂದು ಹಲವು ಬಾರಿ ಸ್ಥಳೀಯ ಆಡಳಿತಕ್ಕೆ ಹಿಂದೂಪರ ಸಂಘಟನೆಯವರು ಮನವಿ ಮಾಡಿದ್ದಾರೆ. ಆದರೆ, ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತೀಚೆಗೆ ಮುಸ್ಲಿಂರೊಬ್ಬರು ಮುರಿನಕಟ್ಟೆ ಸ್ಥಳದಿಂದ ಹಿಂದೆ ಮನೆ ಕಟ್ಟಲು ಸಿದ್ಧತೆ ನಡೆಸಿದ್ದರು. ಮುರಿನಕಟ್ಟೆ ಜಾಗ ಒತ್ತುವರಿಯಾಗುತ್ತೆ ಎಂದುಕೊಂಡು ಹಿಂದು ಜಾಗರಣೆ ವೇದಿಕೆಯವರು ಭಾನುವರ ಮುಂಜೆ ಕಟ್ಟೆ ನಿರ್ಮಿಸಿದ್ದರು. ಇದಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ಪಕ್ಷ ಪಡಿಸಿ ಕಟ್ಟೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ರಾತ್ರಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳ ಎದುರಿನಲ್ಲೇ ಕಟ್ಟೆ ಒಡೆದು ಹಾಕಿದರು. ಈ ವೇಳೆ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಡರಾತ್ರಿಯವರೆಗೂ ಗಲಾಟೆ ನಡೆದಿದೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಗಲಾಟೆ ಸಂಬಂಧ ಪೊಲೀಸ್ ಇಲಾಖೆ ಏನೆಲ್ಲ ಕ್ರಮ ತೆಗೆದುಕೊಳ್ಳುತ್ತೆ ನೋಡಬೇಕು.



