LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

6 ಗ್ರಾಮಗಳಲ್ಲಿ ವಿನ್ಯಾಸ ಅನುಮೋದನೆ ನೀಡಲು ಮನವಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಸಿಂದಗಿ, ಚಿಕ್ಕಸಿಂದಗಿ, ಬಂದಾಳ, ಸೊಂಪುರ, ರಾಂಪೂರ ಪಿ.ಎ ಹಾಗೂ ಯರಗಲ್ಲ ಬಿ.ಕೆ ಸೇರಿಸಿ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯನ್ನು ಪರಿಸ್ಕರಿಸಿ ವಿಸ್ತರಿಸಲಾಗಿದೆ. ಹೀಗಾಗಿ ಇಲ್ಲಿನ ಪ್ರದೇಶಗಳಿಗೆ ಸಾರ್ವಜನಿಕರ ಅನುಕೂಲತೆ ದೃಷ್ಟಿಯಿಂದ ವಿನ್ಯಾಸ ಅನುಮೋದನೆ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಖಾತೆ ಸಚಿವ ಡಾ.ಯತೀಂದ್ರ ಅವರಿಗೆ ನಗರ ಯೋಜನಾ ಪ್ರಾಧಿಕಾರದ ತಾಲೂಕಾಧ್ಯಕ್ಷ ಹಣಮಂತ ಸುಣಗಾರ ನೇತೃತ್ವದಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಹಾಲಿ ನಗರಸಭೆಯ ಹೊರಗೆಡೆ ಇರುವ ಜಮೀನು ಹಾಗೂ ಗ್ರಾಮಗಳನ್ನು ಕೃಷ ವಲಯ ಎಂದು ಪರಿಗಣಿಸಲು ಸೂಚಿಸಿರವುದರಿಂದ ವಸತಿ, ವಾಣಿಜ್ಯ ಉದ್ದೇಶಗಳಿಗೆ ಪ್ರಾಧಿಕಾರದಿಂದ ಅನುಮೋದನೆ ನೀಡಲು ಆಗುತ್ತಿಲ್ಲ. ಇದರಿಂದಾಗಿ ಈ 6 ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಮನೆ, ಅಂಗಡಿ ನಿರ್ಮಿಸಿಕೊಳ್ಳಲು, ಬ್ಯಾಂಕ್ ಗಳಿಂದ ಸಾಲ ಪಡೆಯಲು ಅನಾನುಕೂಲವಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಗ್ರಾಮಗಳಲ್ಲಿ ವಿನ್ಯಾಸ ಅನುಮೋದನೆ ನೀಡುವಂತಾಗಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST