ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗುರುವಾರ ಮಧ್ಯಾಹ್ನ ಲೋಕಭವನಕ್ಕೆ ತೆರಳಿದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು, ಶಾಸಕರು, ಆಪ್ತರು ಜೊತೆಯಲ್ಲಿದ್ದರು.
ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕಮಾಂಡ್ ಯಾವಾಗ ಹೇಳುತ್ತೋ ಆಗ ರಾಜೀನಾಮೆ ನೀಡುತ್ತೇನೆ ಎಂದು ಮೊದಲೇ ಹೇಳಿದ್ದೇನೆ. ಮೊನ್ನೆ ರಾಜೀನಾಮೆ ನೀಡಿ ಎಂದು ಹೇಳಿದರು. ನಾನು ನಾಡಿದ್ದು ನೀಡುತ್ತೇನೆ ಎಂದಿದ್ದೆ. ಇಂದು ರಾಜೀನಾಮೆ ನೀಡಿದೆ ಎಂದರು. ರಾಜ್ಯಪಾಲರು ಬಂದ ಬಳಿಕ ಅದನ್ನು ಅಂಗೀಕಾರ ಮಾಡುತ್ತಾರೆ ಅನ್ನೋ ವಿಶ್ವಾಸವಿದೆ. ಸಂವಿಧಾನದ ಪ್ರಕಾರಣ ಮಾಡಲೇಬೇಕು. ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡುವುದು ಅವರ ಕರ್ತವ್ಯ ಅಂತಾ ಹೇಳಿದರು.
ನಮ್ಮ ಪಕ್ಷದ 135 ಸ್ಥಾನ ಮತ್ತು 1 ಸ್ಥಾನ ಪಡೆದಿದ್ದೇವೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಸಹ ನೀಡಿದ್ದಾರೆ. ನಾವು ಸಂಪೂರ್ಣ ಬಹುಮತ್ವದಲ್ಲಿದ್ದೇವೆ. ಹೀಗಾಗಿ ಮುಂದಿನ ಮುಖ್ಯಮಂತ್ರಿಗೆ ಅವಕಾಶ ಕೊಡಬೇಕು. ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು ಅಂತಾ ಮನವಿ ಮಾಡುತ್ತೇನೆ ಎಂದರು. ರಾಜಕುಮಾರ್ ಅವರು ಅಭಿಮಾನಿಗಳನ್ನು ದೇವರು ಎಂದರು. ನಾವು ರಾಜಕಾರಣಿಗಳು. ನಮಗೆ ಮತದಾರರೇ ನಮ್ಮ ಅಭಿಮಾನಿ ದೇವರು.
ಕರ್ನಾಟಕದ 7 ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತು. 2 ಬಾರಿ ಮುಖ್ಯಮಂತ್ರಿ, 2 ಬಾರಿ ವಿರೋಧ ಪಕ್ಷ ನಾಯಕ ನಾಗಿದ್ದೆ. ಈ ಅವಕಾಶ ಕೊಟ್ಟ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಧನ್ಯವಾದಗಳು. ನಾನು 2006ರಲ್ಲಿ ಕಾಂಗ್ರೆಸ್ ಗೆ ಬಂದೆ. ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ, ಶಾಸಕರಿಗೆ, ಸಂಸದರಿಗೆ ಧನ್ಯವಾದ ಹೇಳುತ್ತೇನೆ. 2013 ರಿಂದ 2018, 2023ರಿಂದ ಇಲ್ಲಿಯವರೆಗೆ ಸಿಎಂ ಆಗಿದ್ದೆ. ನನ್ನ ಜೊತೆ ಕೆಲಸ ಮಾಡಿದ ಸಹದ್ಯೋಗಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.



