ಸಿಂದಗಿ(Sindagi): ಕಳೆದ ಮೂರು ತಿಂಗಳಿಂದ ಕಬ್ಬಿನ ಟ್ರ್ಯಾಕ್ಟರ್ ಬಿಲ್ ಮಾಡಿಲ್ಲವೆಂದು ತಾಲೂಕಿನ ಮನ್ನಾಪುರದಲ್ಲಿರುವ ಸಂಗಮನಾಥ ಶುಗರ್ ಫ್ಯಾಕ್ಟರಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುರುವಾರ ಕಚೇರಿಗೆ ಬಂದಿರುವ ಮನ್ನಾಪುರ, ಸೋಂಪುರ, ಯರಗಲ್, ಸಿಂದಗಿ, ಬಂಕಲಗಿ ಸೇರಿದಂತೆ ಹಲವು ಗ್ರಾಮಗಳ ರೈತರು ಬಿಲ್ ನೀಡದೆ ಇರುವ ಫ್ಯಾಕ್ಟರಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗ್ಲೇ ಕಬ್ಬಿನ ಬಿಲ್ ಮಾಡಲಾಗಿದೆ. ಆದರೆ, ಟ್ರ್ಯಾಕ್ಟರ್ ಬಿಲ್ ಮಾಡುತ್ತಿಲ್ಲ. ಕಳೆದ ಮೂರು ತಿಂಗಳಿಂದ ಇವತ್ತು ನಾಳೆ ಎಂದು ಹೇಳುತ್ತಲೇ ಇದ್ದಾರೆ. ಇದರಿಂದಾಗಿ ನಮಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ರೈತರು ಗೇಟ್ ಬಂದ್ ಮಾಡಿ ಫ್ಯಾಕ್ಟರಿ ಮೇಲಾಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೈತರು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ನೋಡಿ.
[caption id="attachment_12025" align="alignnone" width="900"]
ಕಾರ್ಖಾನೆ ಗೇಟ್ ಬಂದ್ ಮಾಡಿ ಪ್ರತಿಭಟಿಸಿದ ರೈತರು.[/caption]


