LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸೋಮವಾರ ನಡೆಯಿತು. ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 18ನೇ ವಾರ್ಡ್ ಜೆಡಿಎಸ್ ಸದಸ್ಯ ರಾಜಣ್ಣ ನಾರಾಯಣಕರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಮಾಡಲಾಯಿತು. ಸಾಕಷ್ಟು ಕುತೂಹಲ ಮೂಡಿಸಿದ್ದ ಪುರಸಭೆ ಚುನಾವಣೆಗೆ ತೆರೆ ಬಿದ್ದಿದೆ.

ಒಟ್ಟು 23 ಸದಸ್ಯರಿದ್ದು 18 ಸದಸ್ಯರು ಹಾಜರಿದ್ದರು. ಹೀಗಾಗಿ 1/3 ಆಧಾರದ ಮೇಲೆ ಚುನಾವಣೆ ಪ್ರಕ್ರಿಯೆ ನಡೆಯಿತು. ಐವರು ಸದಸ್ಯರು ಗೈರಾಗಿದ್ದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸದಸ್ಯರೊಂದಿಗೆ ಪುರಸಭೆ ಮುಂಭಾಗದಲ್ಲಿ ಸಂಭ್ರಮಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಸೇರಿದಂತೆ ಅನೇಕರಿದ್ದರು. ನೂತನ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಸದಾ ಸಿದ್ಧ ಎಂದರು.

‘ಅಧ್ಯಕ್ಷನಾಗಬೇಕು ಎನ್ನುವುದು ಬಹಳ ದಿನಗಳ ಕನಸಿತ್ತು. ಶಾಸಕರು, ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿದ್ದೇನೆ. ಸರ್ಕಾರದೊಂದಿಗೆ ಒಡನಾಟ ಇರುವುದರಿಂದ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ. ಶಾಸಕರ ಸಹಕಾರ ಇರುತ್ತೆ. ಎಲ್ಲ ಸದಸ್ಯರು ಸಹಕಾರ ಕೊಡಬೇಕು. ಎಲ್ಲ ವಾರ್ಡ್ ಅಭಿವೃದ್ಧಿ ಮಾಡುತ್ತೇನೆ.’ – ಶಾಂತವೀರ ಬಿರಾದಾರ, ಸಿಂದಗಿ ಪುರಸಭೆ ನೂತನ ಅಧ್ಯಕ್ಷರು


1ನೇ ವಾರ್ಡ್ ಸದಸ್ಯೆ ಪ್ರತಿಭಾ ಕಲ್ಲೂರ, 2ನೇ ವಾರ್ಡ್ ಸದಸ್ಯೆ ಉಮಾದೇವಿ ಸುಲ್ಪಿ, 4ನೇ ವಾರ್ಡ್ ಸದಸ್ಯೆ ಕಲಾವತಿ ಕಡಕೋಳ, 5ನೇ ವಾರ್ಡ್ ಸದಸ್ಯ ಬಸವರಾಜ ಯರನಾಳ, 6ನೇ ವಾರ್ಡ್ ಸದಸ್ಯ ಹಣಮಂತ ಸುಣಗಾರ, 7ನೇ ವಾರ್ಡ್ ಸದಸ್ಯ ಬಾಶಾಸಾಬ್ ತಾಂಬೋಳಿ, 8ನೇ ವಾರ್ಡ್ ಸದಸ್ಯೆ ಖೈರುನಬಿ ನಾಟೀಕಾರ, 9ನೇ ವಾರ್ಡ್ ಸದಸ್ಯ ಹಾಸೀಮಪೀರ ಆಳಂದ, 10ನೇ ವಾರ್ಡ್ ಸದಸ್ಯೆ ಪಾರ್ವತಿ ದುರ್ಗಿ, 12ನೇ ವಾರ್ಡ್ ಸದಸ್ಯ ಮಹಾಂತೇಶ ಬಿರಾದಾರ, 13ನೇ ವಾರ್ಡ್ ಸದಸ್ಯ ಶಾಂತವೀರ ಮನಗೂಳಿ, 16ನೇ ವಾರ್ಡ್ ಸದಸ್ಯ ಭೀಮಣ್ಣ ಕಲಾಲ, 19ನೇ ವಾರ್ಡ್ ಸದಸ್ಯೆ ತಹಸೀನ ಮುಲ್ಲಾ, 21ನೇ ವಾರ್ಡ್ ಸದಸ್ಯ ಗೊಲ್ಲಾಳಪ್ಪ ಬಂಕಲಗಿ, 22ನೇ ವಾರ್ಡ್ ಸದಸ್ಯ ಶರಣಗೌಡ ಪಾಟೀಲ ಹಾಗೂ 23ನೇ ವಾರ್ಡ್ ಸದಸ್ಯೆ ಮಹಾದೇವಿ ನಾಯ್ಕೋಡಿ ಹಾಜರಿದ್ದರು.

3ನೇ ವಾರ್ಡ್ ಸದಸ್ಯ ಶ್ರೀಶೈಲ ಬೀರಗೊಂಡ, 11ನೇ ವಾರ್ಡ್ ಸದಸ್ಯೆ ವಿಜಯಲಕ್ಷ್ಮಿ ನಾಗೂರ, 15ನೇ ವಾರ್ಡ್ ಸದಸ್ಯೆ ಭಾಗವ್ವ ಡೋಣೂರ, 17ನೇ ವಾರ್ಡ್ ಸದಸ್ಯ ಸಂದೀಪ ಚೌರ ಹಾಗೂ 20ನೇ ವಾರ್ಡ್ ಸದಸ್ಯೆ ಬಸಮ್ಮ ಸಜ್ಜನ ಗೈರಾಗಿದ್ದರು.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST