LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ದರ್ಶನಗೆ ವಿಶೇಷ ಸೌಲಭ್ಯ, 7 ಅಧಿಕಾರಿಗಳಿಗೆ ಶಿಕ್ಷೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Benagaloru): ಕೊಲೆ(Murder) ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್, 11ನೇ ಆರೋಪಿ ಹಾಗೂ ದರ್ಶನ್(D Boss) ಮ್ಯಾನೇಜರ್ ನಾಗರಾಜ್, ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಕುರ್ಚಿಯಲ್ಲಿ ಕುಳಿತು, ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ಭಾನುವಾರ ವೈರಲ್ ಆಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಜೈಲಿನ 7 ಅಧಿಕಾರಿಗಳು ಅಮಾನತು ಶಿಕ್ಷೆ ನೀಡಲಾಗಿದೆ.

ಇದು ಅಲ್ಲದೆ ವಿಡಿಯೋ ಕಾಲ್ ನಲ್ಲಿಯೂ ದರ್ಶನ್ ಮಾತನಾಡಿರುವುದು ವೈರಲ್ ಆಗಿದೆ. ಈ ಸಂಬಂಧ ಆಂತರಿಕ ತನಿಖೆ ನಡೆಯುತ್ತಿದೆ. ಶರಣ ಬಸವ ಅಮೀನಗಡ, ಸಂಪತ್ ಕುಮಾರ್, ಬಸಪ್ಪ ತೇಲಿ, ಶ್ರೀಕಾಂತ್ ತಳವಾರ, ವೆಂಕಪ್ಪ ಕೂರ್ಟಿ, ತಿಪ್ಪೇಸ್ವಾಮಿ ಹಾಗೂ ಪ್ರಭು ಅನ್ನೋ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ(Home Minister) ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಭಾನುವಾರ ಫೋಟೋ ವೈರಲ್ ಆಗುತ್ತಿದ್ದಂತೆ ಹಲವು ಪ್ರಶ್ನೆಗಳು ಮೂಡಿವೆ. ಮಾಜಿ ಪೊಲೀಸ್ ಅಧಿಕಾರಿಗಳು ದುಡ್ಡ ಇದ್ದರೆ ಎಲ್ಲವೂ ಸಿಗುತ್ತೆ. ನರಕವನ್ನು ಸ್ವರ್ಗ ಮಾಡಬಹುದು ಎನ್ನುವ ಮಾತುಗಳನ್ನು ಹೇಳಿದ್ದಾರೆ. ದರ್ಶನ್ ಸ್ಟಾರ್ ನಟ ಎನ್ನುವ ಕಾರಣಕ್ಕೆ ಇಷ್ಟೊಂದು ಸದ್ದು ಮಾಡುತ್ತಿದೆ ಅನ್ನೋದು ಸಹ ಅಷ್ಟೇ ಸತ್ಯ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST