LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ವಿಶ್ವಪ್ರಕಾಶ ಮಲಗೊಂಡಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ

ಪ್ರಜಾಸ್ತ್ರ ಸುದ್ದಿ

ಆಲಮೇಲ(Alamela): ಕರ್ನಾಟಕ ಸಂಭ್ರಮ-50ರ ಸವಿನೆನಪಿನಲ್ಲಿ ಆಲಮೇಲ ತಾಲೂಕಾಡಳಿತದಿಂದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ‘ತಾಲೂಕು ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ವಿಶ್ವಪ್ರಕಾಶ ಗುರುತಿಸಿಕೊಳ್ಳುತ್ತಿದ್ದು, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಕೆ.ವಿಜಯಕುಮಾರ ಸೇರಿದಂತೆ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ವೇಳೆ ಪಿಎಸ್ಐ ಅರವಿಂದ ಅಂಗಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ, ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ ಪಠಾಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ನಾಯಕ, ನೌಕರರ ಸಂಘದ ತಾಲೂಕಾಧ್ಯಕ್ಷ ರವಿ ಬಿರಾದಾರ, ಕಸಾಪ ತಾಲೂಕಾಧ್ಯಕ್ಷ ಶಿವಶರಣ ಗುಂದಗಿ, ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಭೀಮಾಶಂಕರ ಕೋಟಾರಗಸ್ತಿ ವೇದಿಕೆ ಮೇಲಿದ್ದರು.

ವಿಶ್ವಪ್ರಕಾಶ ಟಿ.ಮಲಗೊಂಡ ಮೂಲತಃ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಗುಂದಗಿ ಗ್ರಾಮದವರಾಗಿದ್ದು, ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದು, ಸುಮಾರು 20 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿಯೇ ಬಾಲ ನಟನಾಗಿ ಅಭಿನಯಿಸಿದ್ದು ಇವರು ಒಬ್ಬರೇ. ಇವರ ಸಾಧನೆಗೆ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಲಭಿಸಿದೆ. ಸಾಮಾಜಿಕ ಕಳಕಳಿ ಭಾವೈಕ್ಯತೆಯ ಸಂದೇಶ ಸಾರುವ ಹಲವು ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.


ಕಾರ್ಯಕ್ರಮದಲ್ಲಿ ಶಿರಸ್ತೇದಾರ ಪಿ.ಎಸ್ ಮೂಕಿಹಾಳ, ಪ್ರದಸ ಎನ್.ಪಿ ದಶವಂತ, ಕಂದಾಯ ನಿರೀಕ್ಷಕ ಎಮ್.ಎ ಅತ್ತಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಎಮ್.ಕೆ ಪೂಜಾರಿ, ಅನೀಲ ಅವಜಿ, ಭೀಮಣ್ಣ ಜೇರಟಗಿ, ವಿನೋದ ಭೀಸೆ, ಡಾ.ಸಮೀರ ಹಾದಿಮನಿ, ಸೇರಿದಂತೆ ಅನೇಕರಿದ್ದರು. ರವಿ ಹೊಸಮನಿ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ ನಿರೂಪಿಸಿದರು. ಅಪ್ಪು ಶೆಟ್ಟಿ ವಂದಿಸಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST