LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೂ.28ಕ್ಕೆ ತಳವಾರ ಸಮಾಜದ ಸಮುದಾಯ ಭವನ ಭೂಮಿಪೂಜೆ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ನಗರದಲ್ಲಿ ಜೂನ್ 28ರಂದು ತಳವಾರ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನಡೆಯಲಿದೆ. ನಗರದ ಸರ್ಕಾರಿ ಆದರ್ಶ ಶಾಲೆ ಹತ್ತಿರದಲ್ಲಿ 20 ಗುಂಟೆಯ ವಿಸ್ತೀರ್ಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಯಾರಿಗಳು ನಡೆದಿದ್ದು, ಶುಕ್ರವಾರ ಶಾಸಕ ಅಶೋಕ ಮನಗೂಳಿಯವರ ನೇತೃತ್ವದಲ್ಲಿ ತಳವಾರ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಲಾಯಿತು.

ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೋಟಾರಗಸ್ತಿ ಪುರಸಭೆ ಮಾಜಿ ಸದಸ್ಯ ಬಸವರಾಜ ಯರನಾಳ, ಜಯಶ್ರೀ ಹದನೂರ, ಸಮಾಜದ ಮುಖಂಡರಾದ ಪ್ರಭು ವಾಲೀಕಾರ, ರಾಜು ನರಗೋಧಿ, ಭರತೇಶ ಹಿರೋಳ್ಳಿ, ಮಲ್ಲು ಸಿಂದಗಿ, ಸಂಜೀವಕುಮಾರ ಡಾಂಗಿ, ಬಸವರಾಜ ಭೂತಿ, ಭೀಮು ರೋಡಗಿ, ನಾಗು ತಳವಾರ, ಮಲ್ಲಪ್ಪ ಹಿರೋಳ್ಳಿ, ಈರಣ್ಣ ಕುರಿ, ಲಕ್ಕಪ್ಪ ಹೊನಗುಡಿ, ಮಡಿವಾಳ ನಾಯ್ಕೋಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿ ನಡೆಯಲಿದೆ. ಇನ್ನು ಹೆಚ್ಚಿನ ಅನುದಾನ ಒದಗಿಸಿ ಭವನವನ್ನು ಇನ್ನಷ್ಟು ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜದ ಮುಖಂಡರು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದು, ಅದಕ್ಕೆ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಮುಖಂಡರು ಹೇಳಿದ್ದಾರೆ. ಜೂನ್ 28ರಂದು ಮುಂಜಾನೆ 11 ಗಂಟೆಗೆ ನಡೆಯುವ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಶರಣಪ್ಪ ಸುಣಗಾರ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST