LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಲಸಂಗಿ ಗೆಳೆಯರ ಪ್ರತಿಷ್ಠಾನ ಯುವ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಹಲಸಂಗಿ ಗೆಳೆಯರ ಪ್ರತಿಷ್ಟಾನ ವತಿಯಿಂದ 2022, 2023 ಹಾಗೂ 2024ರ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಜಾನಪದ ಸಾಹಿತ್ಯ ಹಾಗೂ ಸಮಗ್ರ ಸಾಹಿತ್ಯ, ವಿಮರ್ಶೆ, ಸೃಜನಶೀಲ ಕೃತಿಗಳನ್ನು ಯುವ ಪ್ರಶಸ್ತಿಗಾಗಿ ಆಯ್ಕೆ ಮಾಡಲು ಯುವ ಸಾಹಿತಿ-ಲೇಖಕರಿಂದ ಅರ್ಜಿ ಆಹ್ವಾನಿಸಿದೆ. ಯುವ ಪ್ರಶಸ್ತಿಗೆ ಕೃತಿಗಳನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಗಲ್ಲ ಶ್ರೀ ಹನಮಂತರಾಯ ರಂಗ ಮಂದಿರ, ಸ್ಟೇಷನ್ ರಸ್ತೆ, ವಿಜಯಪುರ ಇವರಿಗೆ ತಲುಪುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರಿಯರ್ ಇಲ್ಲವೆ ಅಂಚೆ ಮೂಲಕ ಕಳುಹಿಸಬಹುದಾಗಿದೆ ಅರ್ಜಿ ಕಳಿಸಬಹುದಾಗಿದೆ. ಹೆಸರು, ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯ ವಿವರಗಳೊಂದಿಗೆ ಪುಸ್ತಕಗಳ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಕಳುಹಿಸಬಹುದಾಗಿದೆ. ಲೇಖಕರ ವಯೋಮಿತಿ ಆಯಾ ಸಾಲಿಗೆ 35 ವರ್ಷ ಮೀರಿರಬಾರದು. ಪ್ರಶಸ್ತಿಗೆ ಸಲ್ಲಿಸುವ ಕೃತಿಗಳನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಅಥವಾ ಅಭಿನಂದನ ಕೃತಿ ಆಗಿರಬಾರದು. ಸ್ವರಚಿವಾಗಿದ್ದು, ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು. ಪ್ರಕಟಣೆಗೆ ಸಲ್ಲಿಸುವ ಕೃತಿಯ ಬಿಡಿಯ ಭಾಗವಾಗಲಿ ಹಾಗೂ ಇಡಿಯಾಗಲಿ ಎಲ್ಲಿಯೂ ಪ್ರಕಟವಾಗಿರಬಾರದು. ಮೇ-27  ರಿಂದ  ಜೂನ್ 10ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತ ಇಲಾಖೆ ಕಚೇರಿಯನ್ನು ಹಾಗೂ ಕಚೇರಿಯ ದೂರವಾಣಿ ಸಂಖ್ಯೆ 08352-251261ಗೆ ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST