ಪ್ರಜಾಸ್ತ್ರ ಸುದ್ದಿ
ಭಟ್ಕಳ(Bhatkal): ಕಪ್ಪೆಚಿಪ್ಪು ಆರಿಸಲು ಹೋದ 7 ಮಹಿಳೆಯರು ಸೇರಿ 8 ಜನರು ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರಂತವೊಂದು ತಾಲೂಕಿನ ಶಿರಾಲಿಯ ಅಳ್ವೆಕೋಡಿ ಹತ್ತಿರ ಭಾನುವಾರ ನಡೆದಿದೆ. ಕೆಲವರು ನಾಪತ್ತೆಯಾಗಿದ್ದರು. ಸೋಮವಾರ ಮುಂಜಾನೆ ಮಾದೇವ ಜಟ್ಟಪ್ಪ ನಾಯ್ಕ(52) ಮೃತದೇಹ ಪತ್ತೆಯಾಗಿದೆ. ಈಗ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
14 ಜನರು ಕಪ್ಪೆಚಿಪ್ಪು ಆರಿಸಲು ಹೋಗಿದ್ದರು. ಅದರಲ್ಲಿ 11 ಜನರು ಮೃತಪಟ್ಟಿದ್ದಾರೆ. ಮೂವರು ಬದುಕುಳಿದಿದ್ದಾರೆ. ಇವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



