LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆ ಕೆಲಸಕ್ಕೆ ಬಂದವರಿಂದ ಕಳ್ಳತನ: ಇಬ್ಬರ ಬಂಧನ

ಪ್ರಜಾಸ್ತ್ರ ಸುದ್ದಿ

ಕಾಸರಗೋಡು(kasaragod): ಮನೆ ಕೆಲಸಕ್ಕೆ ಬಂದಿದ್ದ ಯುವತಿಯರಿಬ್ಬರು(Girls) ಕಳ್ಳತನ ಮಾಡಿದ ಸಂಬಂಧ ಅವರನ್ನು ಪೊಲೀಸರಿಗೆ(Police) ಒಪ್ಪಿಸಿದ ಘಟನೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುತ್ತನಂತ್ತಿಟ್ಟ ಮೂಲದ ಬೆಸ್ಲಿ ಹಾಗೂ ಜಿನ್ಸಿ ಎನ್ನುವ ಇಬ್ಬರು ಯುವತಿಯರನ್ನು ಮನೆಯವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರು ಮನೆಯಲ್ಲಿನ ಚಿನ್ನಾಭರಣ, ಐಫೋನ್, ಸ್ಮಾರ್ಟ್ ವಾಚ್ ಕಳ್ಳತನ ಮಾಡಿದ್ದರು.

ಕುಬಣೂರಿನ ಸೈನುದ್ದೀನ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಮನೆಯಲ್ಲಿ ಐಫೋನ್(Iphone) ಕಳ್ಳತನವಾಗಿತ್ತು. ಫೋನ್ ಎಲ್ಲಿಯೋ ಬಿದ್ದು ಹೋಗಿರಬಹುದೆಂದು ಮನೆಯವರು ಅನುಮನಾಗೊಂಡಿದ್ದರು. ಈ ಯುವತಿಯರು ಆಗಸ್ಟ್ 24 ಹಾಗೂ 25ರಂದು ಮತ್ತೆ ಕೆಲಸಕ್ಕೆ ಬಂದಿದ್ದರು. ಆಗ ರೂಮಿನಲ್ಲಿದ್ದ ಬ್ಯಾಗ್ ನಲ್ಲಿನ ಚಿನ್ನಾಭರಣ(Gold), ಮೊಬೈಲ್(Mobile), ಸ್ಮಾರ್ಟ್ ವಾಚ್ ಕಳ್ಳತನವಾಗಿತ್ತು. ಇದರಿಂದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಕಳ್ಳತನದ ಹಿಂದೆ ಯುವತಿಯರು ಇರುವ ಸುಳಿವು ಸಿಕ್ಕಿದೆ. ಹೀಗಾಗಿ ಅವರಿಗೆ ಮತ್ತೆ ಮನೆ ಕೆಲಸಕ್ಕೆ ಬನ್ನಿ ಎಂದು ಕರೆಸಲಾಗಿದೆ. ಆಗ ಕಳ್ಳತನವಾದ ವಸ್ತುಗಳ ಕುರಿತು ವಿಚಾರ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆಗ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST