LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಮಸಗಿಯ ನಿರಾಶ್ರಿತ ಕುಟುಂಬಗಳಿಗೆ ದಿನಸಿ ಸಾಮಗ್ರಿ ನೀಡಿದ ವೆಂಕಟೇಶ್ವರ ಸ್ವಾಮೀಜಿ

ಪ್ರಜಾಸ್ತ್ರ ಸುದ್ದಿ

ಆಲಮೇಲ(Alamela): ಭೀಮಾನದಿಯ ಪ್ರವಾಹದಿಂದಾಗಿ ಸಿಂದಗಿ ಮತಕ್ಷೇತ್ರದ ಆಲಮೇಲ ತಾಲೂಕಿನ ಕುಮಸಗಿ ಗ್ರಾಮಸ್ಥರು ಮನೆಗಳನ್ನು ಕಳೆದುಕೊಂಡಿದ್ದಾರೆ. 40 ಕುಟುಂಬಗಳನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಗ್ರಾಮದ ವೆಂಕಟೇಶ್ವರ ಮಠದ  ಅಭಿನವ ವೆಂಕಟೇಶ್ವರ ಮಹಾಸ್ವಾಮಿಗಳು ಪೂರೈಕೆ ಮಾಡಿದ್ದಾರೆ.

40 ಕುಟುಂಬಗಳಿಗೆ ತಮ್ಮ ಮಠದಿಂದ ದಿನಸಿ ಸಾಮಗ್ರಿಗಳ ಕಿಟ್ ನೀಡಿ ಅವರಿಗೆ ಒಂದಿಷ್ಟು ನೆರವು ನೀಡಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ತಾವು ಬಂದು ನಮ್ಮ ದಿನನಿತ್ಯದ ಜೀವನಕ್ಕೆ ಬೇಕಾಗಿರುವ ದವಸ ಧಾನ್ಯಗಳನ್ನು ನೀಡಿರುವುದು ನಮಗೆ ಧೈರ್ಯ ಬಂದಿದೆ ಎಂದು ಗ್ರಾಮಸ್ಥರು ತಮ್ಮ ಸಂಕಷ್ಟ ಹೇಳಿಕೊಂಡರು. ವೆಂಕಟೇಶ್ವರ ಪೂಜ್ಯರ ಮಠ ತಮ್ಮ ಜೊತೆಗೆ ಇರುತ್ತದೆ. ತಮ್ಮ ಅನುಕೂಲಕ್ಕಾಗಿ ತಾಲೂಕಿನ ಆಡಳಿತ ಮಂಡಳಿಯ ಜೊತೆಗೆ ಮತ್ತು ಶಾಸಕರ ಜೊತೆ ಮಾತನಾಡಿ ತಮಗೆ ಸಕಲ ಸೌಲತ್ತು ಒದಗಿಸಲು ಒತ್ತಾಯಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ರಾಜ ಕಬ್ಬು ಬೆಳೆಗಾರರ ಸಂಘದ ಸಿಂದಗಿ ತಾಲೂಕ ಅಧ್ಯಕ್ಷರಾದ ಧರಪ್ಪ ಗೌಡ ಬಿರಾದಾರ ಮಾತನಾಡಿ ಬಿಜಾಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಮತ್ತು ಭೀಮಾನದಿ ಪ್ರಭಾವದಿಂದ ಕಬ್ಬು ಹತ್ತಿ ತೊಗರಿ ಉದ್ದು ಹೆಸರು ಮೆಣಸಿನ ಗಿಡ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಒಂದು ಎಕರೆಗೆ 50 ಸಾವಿರ ರೂಪಾಯಿ ಬೆಳೆ ಪರಿಹಾರ ನೀಡಬೇಕು ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST