ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2026 ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 193ರ ಪ್ರಕರಣ 5ರಂತೆ ಗ್ರಾಮ ಪಂಚಾಯತಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಮತ್ತು ಸ್ಥಾನಗಳ ನಿಗದಿಪಡಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ ರಚನೆ ಮತ್ತು ಪುನರ್‌ರಚನೆಯಾದ ಗ್ರಾಮ ಪಂಚಾಯತಿಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಮತ್ತು ಸ್ಥಾನಗಳನ್ನು ನಿಗದಿಪಡಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಜೂನ್ 23ರೊಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ.
ವಿಜಯಪುರ ತಾಲೂಕಿನ ಐನಾಪುರ, ಜುಮನಾಳ ಮತ್ತು ಹೊನಗನಹಳ್ಳಿ, ನಿಡಗುಂದಿ ತಾಲೂಕಿನ ಗಣಿ ಆರ್.ಸಿ, ಬಸವನಬಾಗೇವಾಡಿ ತಾಲೂಕಿನ ವಡವಡಗಿ, ಕೊಲ್ಹಾರ ತಾಲೂಕಿನ ಅರಷಣಗಿ ಮತ್ತು ಸಿದ್ಧನಾಥ ಆರ್.ಸಿ, ತಾಳಿಕೋಟ ತಾಲೂಕಿನ ಸಾಸನೂರ, ಸಿಂದಗಿ ತಾಲೂಕಿನ ಚಾಂದಕವಟೆ, ಯರಗಲ್ ಬಿ.ಕೆ, ಗುತ್ತರಗಿ ಮತ್ತು ಗಬಸಾವಳಗಿ, ಆಲಮೇಲ ತಾಲೂಕಿನ ಗ್ರಾಮ ಪಂಚಾಯತಿಗಳ ಗ್ರಾಮ ಪಂಚಾಯತಿಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಮತ್ತು ಸ್ಥಾನಗಳನ್ನು ನಿಗದಿಪಡಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಈ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಜೂನ್ 23ರ ಸಂಜೆ 5 ಗಂಟೆಯೊಳಗಾಗಿ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.



