LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಜನಿವಾರ ತೆಗೆಸಿರುವುದು ಖಂಡಿಸಿ ಪ್ರತಿಭಟನೆ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಸಿಇಟಿ ಪರೀಕ್ಷೆಯ ವೇಳೆ ಬೀದರ ಹಾಗೂ ಶಿವಮೊಗ್ಗದಲ್ಲಿ ಜನಿವಾರ ಹಾಗೂ ಕೈಯಲ್ಲಿನ ದಾರ ತೆಗೆಸಿದ ಘಟನೆ ಖಂಡಿಸಿ ಬ್ರಾಹ್ಮಣ, ದಲಿತ, ಹಾಲುಮತ, ಕ್ಷತ್ರೀಯ, ವಿಶ್ವಕರ್ಮ, ರಜಪೂತ, ಮರಾಠ ಸಮಾಜದ ಹಲವು ಸಂಘಟನೆಗಳ ಹಾಗೂ ವಿವಿಧ ಹಿಂದು ಸಂಘಟನೆಗಳು ಹಾಗೂ ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ಘಟನೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ನಂತರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.

ಭಾವಸಾರ ಕ್ಷೇತ್ರಿಯ ಸಮಾಜದ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಕೆಲಸವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದು, ಈ ಹೇಯಕೃತ್ಯ ಎಂದರು. ಮಾಜಿ ವಿಧಾನ ಪರಿಷತ ಸದಸ್ಯ ಅರುಣ ಶಹಾಪೂರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂವರೆಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ನೋಡಿದರೆ ಅವರ ಬೆಂಬಲ ಈ ರೀತಿ ವರ್ತಿಸಿದ ತಪ್ಪಿತಸ್ಥರನ್ನು ಬಚಾವ್ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಸರ್ಕಾರವು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ದಲಿತ ಸಮಾಜದ ಯುವಮುಖಂಡ ಪುನಿತ ಕಾಂಬಳೆ ಮಾತನಾಡಿ, ದಲಿತ ಸಮಾಜದವರು ಸನಾತನಿಗಳಿಗೆ ಎಲ್ಲಿಯೇ ಅನ್ಯಾಯವಾದರು ನಾವು ಅವರ ಬೆಂಬಲಕ್ಕೆ ನಿಲ್ಲುತ್ತವೆ ಎಂದರು. ಶ್ರೀ ರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ಮಾತನಾಡಿ, ಬ್ರಾಹ್ಮಣ ಸಮಾಜ ಯಾವತ್ತೂ ಸಹಿಷ್ಣರು. ಶಿವಮೊಗ್ಗ ಹಾಗೂ ಬೀದರದಲ್ಲಿ ನಡೆದ ಜನಿವಾರ ತೆಗೆಸುವಂತಹ ಕೆಲಸ ನಾನು ಖಂಡಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನೀಲಕಂಠ ಕಂದಗಲ, ವಿಜಯ ಚವ್ಹಾಣ, ರಾಹುಲ ಜಾಧವ, ಶ್ರೀಕಾಂತ ಕುಂದನಗಾರ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್ಲ, ಕೃಷ್ಣಭಟ ಗಲಗಲಿ, ಶ್ರೀಹರಿ ಗೊಳಸಂಗಿ, ನಾಗರಾಜ ಲಂಬು, ಲಕ್ಷ್ಮಿಕಾಂತ ಕುಲಕರ್ಣಿ, ವೆಂಕಟೇಶ ಜೊಶಿ, ದತ್ತಾ ಕುಲಕರ್ಣಿ, ಗಿರಿಶ ಕುಲಕರ್ಣಿ, ವಕೀಲರಾದ ಎಸ್.ಎಂ. ಸೋಲ್ಲಾಪಟ್ಟಿ, ಸಂಜೀವ ಜಹಾಗೀರದಾರ, ಎಸ್.ವಿ. ಜಹಾಗೀರದಾರ, ಆರ್.ಎಂ. ಕುಲಕರ್ಣಿ, ಬಿಂದುಮಾಧವ ಕಾಸನೀಸ, ವಿದ್ಯಾಧರ ಜೋಶಿ, ಪಾಪುಸಿಂಗ ರಜಪೂತ, ಉಮೇಶ ವಂದಾಲ, ಮುಕುಂದ ಕುಲಕರ್ಣಿ, ಸುನೀಲ ಬೈರೋಡಗಿ, ಭೀಮರಾಯ ಜಿಗಜಿಣಗಿ, ರೂಪಸಿಂಗ ಓಲೇಕಾರ, ಪ್ರದೀಪ ಸೋನಾರ, ಪ್ರಭಾಕರ ಭೋಸಲೆ, ಎನ್.ವಿ. ಕುಲಕರ್ಣಿ, ಗೋವಿಂದ ಜೋಶಿ, ವಿಜಯ ಜೋಶಿ, ದತ್ತಾತ್ರೇಯ ಜೋಶಿ, ರಮೇಶ ಕುಲಕರ್ಣಿ, ಸುದೀರ ಕುಲಕರ್ಣಿ, ಮಹೇಶ ದೇಶಪಾಂಡೆ, ಶ್ರೀನಿವಾಸ ಬೆಟಗೇರಿ ಕೃಷ್ಣಾ ಗುನ್ನಾಳಕರ, ಭಾಗ್ಯಶ್ರೀ ಕಟ್ಟಿ, ಕೃಷ್ಣಾಜಿ ಕುಲಕರ್ಣಿ, ಗೋವಿಂದ ಜೋಶಿ, ಅರವಿಂದ ಜೋಶಿ ಜ್ಞಾನೇಶ್ವರ ಕುಲಕರ್ಣಿ, ಮದನ ಭಾಗವತ, ಮನೋಜ ಶಹಾಪೂರ, ಶಿವಾನಂದ ಭುಯ್ಯಾರ, ಮೋಹನ ಕುಲಕರ್ಣಿ, ನಂದಕಿಶೋರ ಕುಲಕರ್ಣಿ, ಶರಣು ಸಬರದ, ವಿಕಾಸ ಪದಕಿ, ಆನಂದ ಕುಲಕರ್ಣಿ, ಪ್ರಸನ್ನಾಚಾರ ಕಟ್ಟಿ, ಕಶಪ ಆಚಾರ ಗೋರನಾಳ, ಉಪೇಂದ್ರ ದೇಸಾಯಿ, ಚಿದಂಬರ ಪಾಟೀಲ, ಪವಮಾನ ಆಚಾರ ಪುರೋಹಿತ, ನರಹರಿ ಆಚಾರ ಮುತ್ತಗಿ, ಶ್ರೀಶಾಚಾರ್ಯ ಸುಳಿಭಾವಿ, ಭರತ ಕುಲಕರ್ಣಿ, ಚೈತ್ರಾ ಗೋಠೆಕರ, ಕೀರ್ತಿ ಕುಲಕರ್ಣಿ, ಸುಜಾತ ಕುಲಕರ್ಣಿ, ರಾಧ ಕುಲಕರ್ಣಿ, ರಾಜು ಹಜೇರಿ, ಪ್ರಭಾಕರ ಭೋಸಲೆ, ಸಂದೀಪ ಅರ್ಜುಣಗಿ, ಪವನ ಕುಲಕರ್ಣಿ, ಅಜೀತ ಕುಲಕರ್ಣಿ, ಭಾಗ್ಯಶ್ರೀ ಕಟ್ಟಿ, ಆರ್.ಬಿ. ಕುಲಕರ್ಣಿ, ಕಿರಣ ಕುಲಕರ್ಣಿ ಸೇರಿ ಅನೇಕರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST