LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಪ್ರಗತಿಪರ ಹೋರಾಟಗಾರ ಸದಾನಂದ ಮೋದಿ ನಿಧನ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಹಿರಿಯ ಸಮಾಜವಾದಿ ಹೋರಾಟಗಾರ ಸದಾನಂದ ಮೋದಿ(68) ಅವರು ಬುಧವಾರ ನಿಧನ ಹೊಂದಿದ್ದಾರೆ. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಪಾರ ಬಂಧುಗಳು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಮಾರ್ಕ್ಸವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿ ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಚಳುವಳಿಗೆ ಧುಮುಕಿದ್ದ ಸದಾನಂದ ಮೋದಿ, ಎಸ್ಎಫ್ಐ, ಡಿವೈಎಫ್ಐ ಸಂಘಟನೆಗಳ ಮುಂಚೂಣಿಯಲ್ಲಿದ್ದು ಹಲವಾರು ಹೋರಾಟಗಳಲ್ಲಿ ಭಾಗಿಯಾದವರು.

ವಿಜಯಪುರದ ದಾನಮ್ಮ ಪ್ರಕರಣದಲ್ಲಿ ಆಕೆಗೆ ನ್ಯಾಯ ಕೊಡಿಸುವುದಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸದಾನಂದ ಮೋದಿ, ಕೇಸನ್ನೂ ಎದುರಿಸುತ್ತಿದ್ದರು. ರಾಜ್ಯದೆಲ್ಲೆಡೆ ನಡೆಯುವ ಪ್ರಗತಿಪರ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಸದಾನಂದ ಮೋದಿ, ಅನ್ಯಾಯದ ವಿರುದ್ಧ ಸದಾ ಹೋರಾಟ ನಡೆಸುತ್ತಿದ್ದರು. ಬಿಜಾಪುರ ಜಿಲ್ಲೆಯ ಎಲ್ಲಾ ಪ್ರಗತಿಪರ, ದಲಿತ ಸಂಘಟನೆಗಳ ಜೊತೆಯಲ್ಲಿ ನಿಕಟ ಒಡನಾಟ ಹೊಂದಿದ್ದರು. ಇವರು ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST