LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಎಲ್ಲರ ಗಮನ ಸೆಳೆದ ಶ್ವಾನ ಪ್ರದರ್ಶನ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ಪರೇಡ್ ಗ್ರೌಂಡನಲ್ಲಿ ಶನಿವಾರ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ನಡೆಯಿತು. ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರದರ್ಶನದಲ್ಲಿ  ಸುಮಾರು 20 ವಿವಿಧ ತಳಿಯ ಶ್ವಾನಗಳು ಪಾಲ್ಗೊಂಡು,  ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ 182 ಶ್ವಾನಗಳ ಮಾಲೀಕರು ನೋಂದಣಿ ಮಾಡಿಸಿ ಭಾಗವಹಿಸಿದ್ದರು. ಗ್ರೇಟ್ ಢೇನ್, ಲ್ಯಾಬ್ರಡಾರ್, ಗೋಲ್ಡನ್ ರಿಟೈವರ್, ಕಾಕರ್ ಸ್ಫೇನಿಯಲ್, ಮುಧೋಳ ಹೌಂಡ್, ಪಮೇರಿಯನ್, ಸೈಬೇರಿಯನ್ ಹಸ್ಕಿ, ಡಾಗ್ ಅರ್ಜೆಂಟೆನಾ, ಬೀಗಲ್, ಸ್ವಿಡ್ಜು, ಕೇನ್ ಕಾರ್ಸೋ, ಪಸ್ಮಿ ಸೇರಿದಂತೆ ಹೀಗೆ ವಿವಿಧ ಮುದ್ದು ಶ್ವಾನಗಳು ಎಲ್ಲರ ಗಮನ ಸೆಳೆದವು. ಅಪರೂಪದ ಶ್ವಾನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಇಲಾಖೆಯಿಂದ ಸ್ಥಾಪಿತ ಕೌಂಟರಿನಲ್ಲಿ ಪ್ರದರ್ಶನಕ್ಕೆ ಕರೆ ತಂದ ಶ್ವಾನಗಳ ನೋಂದಣಿ ಕಾರ್ಯ ನಡೆದು, ಆರೋಗ್ಯ ತಪಾಸಣೆ ನಡೆಸಿ, ರೇಬಿಸ್ ಲಸಿಕೆ ಹಾಗೂ ಆಹಾರ ನೀಡಲಾಯಿತು.

ಆಯ್ಕೆಯಾದ ಶ್ವಾನಗಳಿಗೆ ಅತ್ಯುತ್ತಮ ಪ್ರಶಸ್ತಿ ವಿತರಿಸಲಾಯಿತು. ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ನಾಗರಾಜ, ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಆರ್.ಮಂಜುನಾಥ ಹಾಗೂ ಬೆಳಗಾವಿಯ  ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಡಿ.ಸಣ್ಣಕ್ಕಿ ಶ್ವಾನ ಪ್ರದರ್ಶನದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಆನಂದ.ಕೆ, ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ.ವಿಠೋಬಾ ಆಸಂಗಿಹಾಳ, ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುಜಾತಾ ಪಾಟೀಲ ಹಾಗೂ ಡಾ.ಸತೀಶ ಮುಂಡಾಸ, ಕೆ.ವಿ.ಎ ಅಧ್ಯಕ್ಷ ಡಾ.ಎಸ್.ಜಿ.ಯಲಗೋಡ, ಡಾ.ರಮೇಶ ರಾಠೋಡ, ಡಾ.ಬಾಳು ಬಂಡಿ, ಡಾ.ಪ್ರಕೃತಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST