LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಔಷಧ ವ್ಯಾಪಾರಸ್ಥರ ಸಂಘದಿಂದ ಮುಷ್ಕರ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಆನ್ಲೈನ್ ಔಷಧ ಮಾರಾಟ ಹಾಗೂ ಅಕ್ರಮ ಇ-ಔಷಧ ಪೋರ್ಟಲ್ ಗಳ ವಿರುದ್ಧ ಬುಧವಾರ ಜಿಲ್ಲೆಯಲ್ಲಿ ಮುಷ್ಕರ ನಡೆಸಲಾಯಿತು. ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ವತಿಯಿಂದ ಮೇ 20ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಅದರಂತೆ ವಿಜಯಪುರ ಜಿಲ್ಲೆಯ 13 ತಾಲೂಕುಗಳಲ್ಲಿ ಅಂಗಡಿ ಬಂದ್ ಮಾಡಿ ಮುಷ್ಕರ ನಡೆಸಲಾಯಿತು.

ಅಕ್ರಮ ಇ ಔಷಧಿ ಪೋರ್ಟಲ್ ಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಎಐ ಆಧರಿತ ನಕಲಿ ಔಷಧಿ ಚೀಟಿಗಳ ಮೂಲಕ ಆಂಟಿಬಯಾಟಿಕ್ ಗಳು ಹಾಗೂ ವ್ಯವಸ ಉಂಟು ಮಾಡುವ ಔಷಧಗಳ ಲಭ್ಯತೆಯು ಗಂಡಾಂತರಕ್ಕೆ ಕಾರಣವಾಗುತ್ತದೆ. ದೊಡ್ಡ ಕಾರ್ಪೂರೇಟ್ ಸಂಸ್ಥೆಗಳು ತೀವ್ರ ರಿಯಾತಿ ಮೂಲಕ ಮಾರುಕಟ್ಟೆಯಲ್ಲಿ ಅಸಮತೋಲವನ್ನು ಹಾಳು ಮಾಡುತ್ತವೆ. ಅಲ್ಲದೆ ಸರಿಯಾದ ಸಮಯಕ್ಕೆ ಜೀವ ರಕ್ಷಕ ಔಷಧಿಗಳು ಸಿಗದೆ ಅಮೌಲ್ಯ ಪ್ರಾಣಗಳು ಹಾನಿಯಾಗುವ ಅಪಾಯವಿದೆ.

ಇನ್ನು ಕೋವಿಡ್ 19 ಸಂದರ್ಭದಲ್ಲಿ ಹೊರಡಿಸಲಾದ ಅಧಿಸೂಚನೆ ತಾತ್ಕಾಲಿಕವಾಗಿತ್ತು. ಆದರೆ, ಅನಗತ್ಯವಾಗಿ ಅದನ್ನು ಇಂದಿಗೂ ಮುಂದುವರೆಸಲಾಗಿದೆ. ಇದು ತರ್ಕಬದ್ಧವಲ್ಲ ಎಂದು ಹೇಳಲಾಗಿದೆ. ತಾತ್ಕಾಲಿಕ ಕೋವಿಡ್ ಅವಧಿಯ ಅಧಿಸೂಚನೆ ತಕ್ಷದಿಂದ ಜಾರಿಗೆ ಬರುವಂತೆ ಹಿಂಪಡೆಯಬೇಕು. ಇ-ಫಾರ್ಮಸಿ ಸಂಬಂಧಿತ ಅಧಿಸೂಚನೆ ಜಿಎಸ್ಆರ್ 817(ಇ) ಹಿಂಪಡೆಯಬೇಕು. ಕಾರ್ಪೂರೇಟ್ ಗಳಿಂದ ಅನ್ಯಾಯದ ಆಳವಾದ ರಿಯಾತಿಯನ್ನು ನಿಲ್ಲಿಸಲು ಲೆವೆಲ್ ಪ್ಲೇಯಿಂಗ್ ಫೀಲ್ಡ್ ನೀತಿಯನ್ನು ಪರಿಚಯಿಸಬೇಕು ಅನ್ನೋ ಮೂರು ಬೇಡಿಕೆಗಳನ್ನು ಇಡಲಾಗಿದೆ. ಈ ವೇಳೆ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಆರ್ ಎತ್ತಿನಮನಿ, ಉಪಾಧ್ಯಕ್ಷ ಆರ್.ವಿ ಯಳಮೇಲಿ, ಗೌರವ ಕಾರ್ಯದರ್ಶಿ ಸಂಗಮೇಶ ಗುಡ್ಡೋಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST