Ad imageAd image

ತಿಲಕ್ ವರ್ಮಾ ಆರ್ಭಟಕ್ಕೆ ನಲುಗಿದ ಗುಜರಾತ್ ಟೀಂ

Nagesh Talawar
ತಿಲಕ್ ವರ್ಮಾ ಆರ್ಭಟಕ್ಕೆ ನಲುಗಿದ ಗುಜರಾತ್ ಟೀಂ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್(Ahmedabad): ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ತಂಡ ಭರ್ಜರಿ 99 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಅತಿ ದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಿದೆ. ಮುಂಬೈ ತಂಡದ ಬ್ಯಾಟರ್ ತಿಲಕ್ ವರ್ಮಾ ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್ ಅಶ್ವಿನಿಕುಮಾರ್ ಮಾರಕ ಬೌಲಿಂಗ್ ದಾಳಿಗೆ ಜಿಟಿ ಪಡೆ ನಲುಗಿದೆ.

ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಶುಭನಂ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮುಂಬೈ ಮೊದಲು ಬ್ಯಾಟ್ ಮಾಡಿತು. ತಿಲಕ್ ವರ್ಮಾ 45 ಬೌಲ್ ಗಳಲ್ಲಿ ಅಜೇಯ 101 ರನ್ ಗಳಿಸಿದರು. ಇದರಲ್ಲಿ 7 ಸಿಕ್ಸ್, 8 ಫೋರ್ ಗಳಿವೆ. ನಮನ್ ಧಿರ್ 45 ರನ್ ಗಳಿಸಿದರು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 200 ರನ್ ಟಾರ್ಗೆಟ್ ನೀಡಿತು. ಜಿಟಿ ಪರ ರಬಡಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಪಡೆದರು.

200 ರನ್ ಗಳ ಗುರಿ ಬೆನ್ನು ಹತ್ತಿದ ಜಿಟಿ ತಂಡ 15.5 ಓವರ್ ಗಳಲ್ಲಿ ಕೇವಲ 100 ರನ್ ಗಳಿಗೆ ಆಲೌಟ್ ಆಯಿತು. ಇಂಪ್ಯಾಕ್ಟ್ ಬೌಲರ್ ಅಶ್ವಿನಿಕುಮಾರ್ ನಿಜಕ್ಕೂ ಇಂಪ್ಯಾಕ್ಟ್ ಮಾಡಿದರು. 4 ಓವರ್ ಗಳಲ್ಲಿ 24 ರನ್ ಕೊಟ್ಟು 4 ವಿಕೆಟ್ ಪಡೆದು ಗಿಲ್ ಪಡೆಯನ್ನು ಕಾಡಿದರು. ಸಾಯಿ ಸುದರ್ಶನ್ 0, ನಾಯಕ ಗಿಲ್ 14, ಬಟ್ಲರ್ 5, ವಾಷಿಂಗ್ಟನ್ ಸುಂದರ್ 26, ಗ್ಲೇನ್ ಪ್ಲಿಪ್ಸ್ 6, ರಾಹುಲ್ ತೆವಾಟಿ 8 ಶಾರೂ ಖಾನ್ 17, ರಶೀದ್ ಖಾನ್ 4, ರಬಡಾ 12, ಸಿರಾಜ್ 0 ರನ್ ಗಳಿಸಿದರು. ಮುಂಬೈ ಪರ ಅಶ್ವಿನಿಕುಮಾರ್ 4, ಸ್ಯಾಟ್ನರ್ ಹಾಗೂ ಅಲ್ಲಾ ಘಾಜ್ನಫರ್ ತಲಾ 2 ವಿಕೆಟ್ ಪಡೆದರು. ಬೂಮ್ರಾ, ನಾಯಕ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು. ತಿಲಕ್ ವರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.

WhatsApp Group Join Now
Telegram Group Join Now
Share This Article