ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಗುಜರಾತಿನ ಆನಂದ ಮುನ್ಸಿಪಾಲಿಟಿಯ ಬಿಜೆಪಿ ಕೌನ್ಸಿಲರ್ ದೀಪು ಗೋವರ್ಧನಭಾಯ್ ಪ್ರಜಾಪತಿ ವಿರುದ್ಧ ಅತ್ಯಾಚಾರ ಹಾಗೂ ಬೆದರಿಕೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿವಾಹಿತ ಮಹಿಳೆ ಆನಂದ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತೆ ಪ್ರಜಾಪತಿ ನಾಪತ್ತೆಯಾಗಿದ್ದಾರೆ. ಪಕ್ಷದಿಂದ ಇವರನ್ನು ಅಮಾನತು ಮಾಡಲಾಗಿದೆ. ಪ್ರಕರಣ ಸಂಬಂಧ ಪ್ರಜಾಪತಿ ಪತ್ತೆ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
ಮತದಾನದ ರಿಸೀದಿ ವಿಚಾರಿಸುವ ನೆಪದಲ್ಲಿ 2024, ಜೂನ್ 6ರಂದು ಪ್ರಜಾಪತಿ ಮನೆಗೆ ಬಂದಿದ್ದರು. ಸಂತ್ರಸ್ತೆ ಪತಿ ಕೆಲಸಕ್ಕೆ ಹೋಗಿದ್ದರು. ಮಕ್ಕಳೊಂದಿಗೆ ಮನೆಯಲ್ಲಿದ್ದಳು. ರಸೀದಿ ಇಲ್ಲವೆಂದು ಮಹಿಳೆ ಹೇಳಿದಾಗ ಫೋನ್ ನಂಬರ್ ಪಡೆದಿದ್ದಾನೆ. ನಂತರ ವಾಟ್ಸಪ್ ಮೂಲಕ ರಸೀದಿ ಕಳಿಸಿದ್ದಾನೆ. ನಂತರ ಫೋನ್ ಮಾಡಿ ಅಸಭ್ಯವಾಗಿ ಮಾತನಾಡಿದ್ದಾನೆ. ನನ್ನ ಬಳಿಯ ನಿನ್ನ ಪತಿಯ ವಿಡಿಯೋ ಇದೆ ಎಂದು ಬೆದರಿಕೆ ಹಾಕಿದ್ದು, ನವೆಂಬರ್ 16ರ ರಾತ್ರಿ ಮನೆಗೆ ಬಂದು ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಅಂದು ಪತಿ ಮಕ್ಕಳೊಂದಿಗೆ ಐಸ್ ಕ್ರೀಂ ತರಲು ಹೋಗಿದ್ದಾರೆ. ಆಗ ಮನೆಗೆ ನುಗ್ಗಿದ ಪ್ರಜಾಪತಿ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ಪತಿ ಕೈಗೆ ಸಿಕ್ಕಿದ್ದು, ಗಲಾಟೆಯಾಗಿದೆ. ನೆರೆಹೊರೆಯವರು ಸೇರಿದ್ದಾರೆ. ಆಗ ಆತನ ಸಹೋದರ ಹಾಗೂ ಸಹಚರರು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.