ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ನಟಿ ಸಮಂತಾ(Samantha) ಖಾಸಗಿ ಬದುಕಿನ ಬಗ್ಗೆ ತುಂಬಾ ಗಂಭೀರ ಆರೋಪ ಮಾಡಿರುವ ಸಚಿವೆ ಕೊಂಡ(Kona Sureka) ಸುರೇಖಾ ವಿರುದ್ಧ ನಟ ಜೂನಿಯರ್ ಎನ್ ಟಿಆರ್(Junior NTR) ಧ್ವನಿ ಎತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು, ಅದರಲ್ಲೂ ಗೌರವಯುತ ಸ್ಥಾನದಲ್ಲಿ ಇರುವವರು ಮತ್ತೊಬ್ಬರ ಖಾಸಗಿ ಬದುಕಿನ ಬಗ್ಗೆ ಆಧಾರ ರಹಿತವಾಗಿ ಮಾತನಾಡಬಾರದು ಎಂದು ಗುರುವಾರ ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದು ನಟ ಅಕ್ಕಿನೇನಿ ನಾಗಾರ್ಜುನ್ ಕುಟುಂಬ ಹಾಗೂ ನಟಿ ಸಮಂತಾ ರುತು ಪ್ರಭು ಪರವಾಗಿ ನಿಂತುಕೊಂಡಿದ್ದಾರೆ.
ಚಿತ್ರರಂಗದ ವಿರುದ್ಧ ಆಧಾರ ರಹಿತವಾಗಿ ಹೇಳಿಕೆಗಳನ್ನು ಕೊಡಬಾರದು. ನಮ್ಮ ವಿರುದ್ಧ ಯಾರಾದರೂ ಈ ರೀತಿ ಆಧಾರ ರಹಿತ ಹೇಳಿಕೆ ನೀಡಿದರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಇದರ ಬಗ್ಗೆ ಧ್ವನಿ ಎತ್ತುತ್ತೇವೆ. ಅವರವರ ವ್ಯಾಪ್ತಿಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಪ್ರಜಾಭುತ್ವ ಭಾರತದಲ್ಲಿ ನಮ್ಮ ಸಮಾಜ ಇಂತಹ ಬೇಜವಾಬ್ದಾರಿ ನಡವಳಿಕೆಗಳನ್ನು ಸಾಮಾನ್ಯವಾಗಿ ನೋಡುವುದಿಲ್ಲವೆಂದು ಖಚಿತಪಡಿಸಿಕೊಳ್ಳೋಣ ಎಂದು ಬರೆದಿದ್ದಾರೆ. ನಟಿ ಸಮಂತಾ, ನಟ(Naga Chaitanya) ನಾಗಚೈತನ್ಯ ಡಿವೋರ್ಸ್ ಪಡೆಯಲು ಬಿಆರ್ ಎಸ್ ನಾಯಕ ಕೆ.ಟಿ ರಾಮ್ ರಾವ್ ಕಾರಣ. ಆಕೆಯನ್ನು ತನ್ನ ಬಳಿ ಕಳಿಸಲು ನಟ ನಾಗಾರ್ಜುನ್ ಗೆ ಹೇಳಿದ್ದ ಎಂದು ಗಂಭೀರ ಆರೋಪವನ್ನು ಸಚಿವೆ ಕೊಂಡ ಸುರೇಖಾ ಮಾಡಿದ್ದಾರೆ.