ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಅಂಗಳದ ಎನರ್ಜಿಟಿಕ್ ಹೀರೋ ಯಾರು ಅಂದರೆ ಅದು ಒನ್ ಅಂಡ್ ಓನ್ಲಿ(Shivanna) ಶಿವಣ್ಣ. 60 ವರ್ಷ ದಾಟಿದರೂ ಇನ್ನೂ ಅದೆ ಯಂಗ್ ಲುಕ್ ನಲ್ಲಿ ಅಬ್ಬರಿಸುತ್ತಿದ್ದಾರೆ. ಇದರ ನಡುವೆ ಅವರು ತಮ್ಮ ಆರೋಗ್ಯದ(Health Issue) ಬಗ್ಗೆ ಮಾತನಾಡಿದ್ದಾರೆ. ನನಗೆ ಆರೋಗ್ಯ ಸಮಸ್ಯೆಯಿದೆ. ಸರ್ಜರಿ ಮಾಡಿಸಬೇಕಿದೆ. ಅಮೆರಿಕಾದಲ್ಲಿ ಮಾಡಿಸಬೇಕಾ, ನಮ್ಮ ದೇಶದಲ್ಲಿ ಮಾಡಿಸಬೇಕಾ ಅನ್ನೋದು ತೀರ್ಮಾನಿಸಿಲ್ಲ. ಇನ್ನೊಂದು ತಿಂಗಳಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ.
ತುಂಬಾ ಸುಸ್ತಿದೆ. ನನ್ನ ಅನಾರೋಗ್ಯದ ಬಗ್ಗೆ ಇಂಡ್ ಸ್ಟ್ರಿಯ ಕೆಲವರಿಗೆ ಗೊತ್ತಿದೆ. ಇದು ಜನರಿಗೂ ಗೊತ್ತಿದ್ದರೆ ಒಳ್ಳೆಯದು. ಇತ್ತೀಚೆಗೆ ನಾನು ಅಭಿಮಾನಿಗಳಿಂದ ದೂರು ಇರುತ್ತಿದ್ದೇನೆ. ಫೋಟೋಗಳಿಗೆ ಅವಕಾಶ ನೀಡುತ್ತಿಲ್ಲ. ಇನ್ ಫೆಕ್ಸನ್ ಆಗಬಾರದು ಎನ್ನುವ ಕಾರಣಕ್ಕೆ. ಹೀಗಾಗಿ ಯಾರೂ ತಪ್ಪು ತಿಳಿಯಬಾರದು. ರಾಮ್ ಚರಣ್ ಜೊತೆ ಸಿನಿಮಾ ಮಾಡಬೇಕಿದೆ. ಅವರಿಗೆ ಇರುವ ವಿಷಯ ಹೇಳಿದ್ದೇನೆ. ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದು ಮತ್ತೆ ಎಂದಿನಂತೆ ಎಲ್ಲದರಲ್ಲೂ ಲವಲವಿಕೆಯಿಂದ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ. ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಿ ಬರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.