ಪ್ರಜಾಸ್ತ್ರ ಸುದ್ದಿ
ಕುಣಿಗಲ್(Kunigal): ಟ್ರ್ಯಾಕ್ಟರ್ ವೊಂದು ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ ತಂದೆ ಹಾಗೂ ಮಗ ಮೃತಪಟ್ಟ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಕೊಡಹಳ್ಳಿಪಾಳ್ಯದಲ್ಲಿ ಭಾನುವಾರ ನಡೆದಿದೆ. ಜಾಣಗೆರೆ ಗ್ರಾಮದ ಶಿವರಾಮಯ್ಯ(52) ಹಾಗೂ ಮಗ ಹರೀಶ್(21) ಮೃತ ದುರ್ದೈವಿಗಳು. ಟ್ರ್ಯಾಕ್ಟರ್ ನಲ್ಲಿ ಅಡಿಕೆ ತುಂಬಿಕೊಂಡು ಬರುತ್ತಿದ್ದರು. ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿ, ಈ ದುರಂತ ನಡೆದಿದೆ. ಮೃತ ಶಿವರಾಮಯ್ಯ ಸಾಹಿತಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯನವರ ಸಹೋದರ ಆಗಿದ್ದಾರೆ.