ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಗಣರಾಜ್ಯೋತ್ಸವ ಸಂಭ್ರಮದ ಹೊತ್ತಿನಲ್ಲಿ ತಮಿಳು ನಟ ತಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಪೋಸ್ಟ್ ಬಿಡುಗಡೆ ಮಾಡಲಾಗಿದೆ. ವೇದಿಕೆ ಮೇಲೆ ನಿಂತುಕೊಂಡು ಅಸಂಖ್ಯಾತ ಅಭಿಮಾನಿಗಳ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರವಿರುವ ಟೈಟಲ್ ಬಿಡುಗಡೆ ಮಾಡಲಾಗಿದೆ. ಇದು ವಿಜಯ್ ನಟನೆಯ 69ನೇ ಸಿನಿಮಾ ಆಗಿದೆ. ಇಷ್ಟು ದಿನ ಅವರ ಮುಂದಿನ ಸಿನಿಮಾ ಯಾವುದು, ಟೈಟಲ್ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.
ಇದು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಯಾಕಂದರೆ, ಈಗಾಗ್ಲೇ ತಮಿಳಗ ವೆಟ್ರಿ ಕಳಗಂ ಎನ್ನುವ ಪಕ್ಷ ಸ್ಥಾಪಿಸಿದ್ದು, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಚ್.ವಿನೋದ್ ಜನ ನಾಯಗನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಕೆವಿಎನ್ ಪ್ರೊಡೆಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.