ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭರ್ಜರಿಯಾಗಿ ಆಟವಾಡಿ ಫೈನಲ್ ತಲುಪಿ ಚಿನ್ನಕ್ಕೆ ಕೊರಳೊಡ್ಡಲು ಒಂದೇ ಒಂದು ಹೆಜ್ಜೆ ಬಾಕಿ ಉಳಿದಿದ್ದ ಕುಸ್ತಿಪಟು ವಿನೀಶಾ ಪೊಗೆಟ್ ಅವರನ್ನು ಅನರ್ಹಗೊಳಿಸಲಾಗಿದೆ. 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೀಶಾ ತೂಕ ಇಂದು ಮುಂಜಾನೆ ಚೆಕ್ ಮಾಡಿದಾಗ 100 ಗ್ರಾಂ ಹೆಚ್ಚಿಗಿದೆ ಎಂದು ಅನರ್ಹಗೊಳಿಸಲಾಗಿದೆ. ಹೀಗಾಗಿ ಇಡೀ ದೇಶ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಲೋಕಸಭೆಯಲ್ಲಿ ಕ್ರೀಡಾ ಸಚಿವ ಮನ್ ಸುಖ್ ಮಾಂಡವೀಯ್ ಮಾತನಾಡಿದ್ದು, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಭಾರತ ಒಲಿಂಪಿಕ್ ಸಂಸ್ಥೆಗೆ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ ಉಷಾ ಅವರೊಂದಿಗೆ ಪ್ರಧಾನಿ ಮಾತನಾಡಿದ್ದು, ಯುನೈಟೆಡ್ ವರ್ಲ್ಡ್ ರಸ್ಲಿಂಗ್ ಗೆ ಭಾರತ ಪ್ರತಿಭಟನೆ ದಾಖಲಿಸಿದೆ ಎಂದು ಹೇಳಿದ್ದಾರೆ. ಫೋಗೆಟ್ ಅನರ್ಹಗೊಳಿಸಿರುವ ಸಂಬಂಧ ವಿಪಕ್ಷಗಳು ಸದನ ಬಹಿಷ್ಕರಿಸಿ ಹೊರ ನಡೆದವು. ಇನ್ನು ದೇಶ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರ ಹಿಂದೆ ಏನೋ ಸಂಚು ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದೆ.