ಪ್ರಜಾಸ್ತ್ರ ಸುದ್ದಿ
ಚಿಕ್ಕಬಳ್ಳಾಪುರ(Chikkaballapura): ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಲಾಯಿತು. ಬಹಳ ಮುಖ್ಯವಾಗಿ ಜಾತಿಗಣತಿ ವಿಚಾರವಾಗಿ ಚರ್ಚಿಸಲಾಯಿತು. ಈಗಿನ ಜಾತಿಗಣತಿ 10 ವರ್ಷ ಹಳೆಯದಾಗಿರುವ ಕಾರಣ ನಿರ್ದಿಷ್ಟ ಕಾಲಾವಧಿಯಲ್ಲಿ ಮರು ಸಮೀಕ್ಷೆ ನಡೆಸಲು ಹೈಕಮಾಂಡ್ ಸೂಚಿಸಿದೆ. ನಾಯಕರ ಮಾತಿಗೆ ನಾವು ಒಪ್ಪಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಲವು ಸಂಘ ಸಂಸ್ಥೆಗಳು, ಜಾತಿಗಳ ಮುಖಂಡರು, ಮಠಾಧೀಶರು, ಕೆಲ ಮಂತ್ರಿಗಳು ಸಹ ಜಾತಿಗಣತಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಪ್ರಸ್ತಾಪವಾಯಿತು. ಈಗಿನ ಸಮೀಕ್ಷೆ ಇರುವುದ 2015ರಲ್ಲಿ ಆಗಿರುವುದು. ಹೊಸದಾಗಿ ಆಗಬೇಕು ಎಂದು ಹೇಳಿದರು. ಹೀಗಾಗಿ ನಾವು ಒಪ್ಪಿಕೊಂಡಿದ್ದೇವೆ. 90 ದಿನದೊಳಗೆ ಸಮೀಕ್ಷೆಯ ವರದಿ ಕೊಟ್ಟಬಿಡಬೇಕು ಅನ್ನೋದು ಚರ್ಚೆಯಾಗಿ ತೀರ್ಮಾನವಾಗಿದೆ ಎಂದು ಹೇಳಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಸೇರಿ ಇತರರು ಹಾಜರಿದ್ದರು.