Ad imageAd image

ಆ್ಯಪಲ್ ಸಿಇಒ ಸ್ಥಾನಕ್ಕೆ ಕುಕ್ ರಾಜೀನಾಮೆ

Nagesh Talawar
ಆ್ಯಪಲ್ ಸಿಇಒ ಸ್ಥಾನಕ್ಕೆ ಕುಕ್ ರಾಜೀನಾಮೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸ್ಯಾನ್ ಫ್ರಾನ್ಸಿಸ್ಕೋ(San Francisco): ಆ್ಯಪಲ್ ಕಂಪನಿಯ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ರಾಜೀನಾಮೆ ಘೋಷಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾಗಿ 65 ವರ್ಷದ ಕುಕ್ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 15 ವರ್ಷಗಳಿಂದ ಕಂಪನಿಯನ್ನು ಮುನ್ನಡೆಸಿದ್ದ ಕುಕ್ ಈಗ ಬದಲಾವಣೆಗೆ ಸಜ್ಜಾಗಿದ್ದಾರೆ.

ಕುಕ್ ಸಿಇಒ ಆಗಿ ಇಷ್ಟು ವರ್ಷ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ವಾರ್ಷಿಕ ಲಾಭ ನಾಲ್ಕು ಪಟ್ಟು ಹೆಚ್ಚಾಗಿ 110 ಬಿಲಿಯನ್ ಡಾಲರ್ ತಲುಪಿದೆ. ಕಂಪನಿಯ ಮೌಲ್ಯ 4 ಟ್ರಿಲಿಯನ್ ಡಾಲರ್ ಆಗಿದೆ. ಆ್ಯಪಲ್ ಕಂಪನಿಯ ಹಾರ್ಡ್ ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಜಾನ್ ಟೆರ್ನಸ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now
Share This Article