LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿರ್ದೇಶಕ ಗುರುಪ್ರಸಾದ್ ಸಾವು.. ನಟ ಜಗ್ಗೇಶ್ ರಾಜಕೀಯ ಮಾತು!

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಮಠ ಎದ್ದೇಳುಮಂಜುನಾಥ ಬಳಿಕ ಮಹನಾಯಕ ಎನ್ನುವ ಚಿತ್ರವನ್ನು ನಟ ಜಗ್ಗೇಶ್ ಜೊತೆಗೆ ನಿರ್ದೇಶಕ ಗುರುಪ್ರಸಾದ್ ಮಾಡಿದರು. ಮೊದಲೆರಡು ಚಿತ್ರಗಳು ಸೂಪರ್ ಹಿಟ್ ಆಗಿ ಇಬ್ಬರಿಗೂ ದೊಡ್ಡ ಯಶಸ್ಸು ತಂದು ಕೊಟ್ಟವು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಮಹಾನಾಯಕ ಸಿನಿಮಾ ಮಾತ್ರ ಸೋಲು ಕಂಡಿತು. ಇದು ಮುಂದೆ ಹಲವು ಟೀಕೆ, ಪ್ರತಿ ಟೀಕೆಯ ಮಾತುಗಳು ಕೇಳಿ ಒಂದಿಷ್ಟು ವಿವಾದ ಪಡೆಯಿತು. ಹೀಗಿರುವಾಗ ಭಾನುವಾರ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ. ಆತ್ಮಹತ್ಯೆ ಮಾಡಿಕೊಂಡು ಸುಮಾರು ಏಳೆಂಟು ದಿನವಾಗಿದೆ. ಮನೆಯಿಂದ ಕೆಟ್ಟ ವಾಸನೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಜಗ್ಗೇಶ್, ನಿರ್ದೇಶಕ ಗುರುಪ್ರಸಾದ್ ಬಗೆಗೆ ಮಾತನಾಡಿರುವ ಮಾತುಗಳ ವಿರುದ್ಧ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಗುರುಪ್ರಸಾದ್ ಬಿಜೆಪಿ ವಿರೋಧಿ, ಎಡಪಂಥೀಯ ಚಿಂತಕ ಎನ್ನುವ ಮಾತುಗಳಿಂದ ಹಿಡಿದು ಎರಡು ಮದುವೆ ಮಾಡಿಕೊಂಡಿದ್ದ, ಕುಡಿತದ ದಾಸನಾಗಿದ್ದ. ಅದೆಂಥದ್ದೂ ತೂರಿಕೆ ಅಂಟಿಕೊಂಡಿತ್ತು ಅನ್ನೋದು ಸೇರಿದಂತೆ ಹಲವಾರು ವಿಚಾರಗಳನ್ನು ತಮ್ಮ ಎಂದಿನ ಕುಹುಕ ಮಾತುಗಳಲ್ಲಿ ಹೇಳಿದ್ದು, ಇದರ ವಿರುದ್ಧ ಬಹುತೇಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಿಮ್ಸ್, ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ವೈಯಕ್ತಿಕ ವಿಚಾರಗಳು ಏನೇ ಇರಲಿ. ಸಾವು ನಡೆದಿದೆ ಎಂದ್ಮೇಲೆ ಏನು ಆಡಬೇಕು, ಏನು ಆಡಬಾರದು ಅನ್ನೋ ಪ್ರಜ್ಞೆಯಿದ್ದೂ ದುರುದ್ದೇಶದಿಂದ ಹೇಳಿಕೆಗಳನ್ನು ಕೊಟ್ಟಿದ್ದಾರೆ ಅಂತಾ ವಾಗ್ದಾಳಿ ನಡೆಸುತ್ತಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST