LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳೆಯ ರುಂಡದೊಂದಿಗೆ ಠಾಣೆಗೆ ಬಂದ ಕ್ರೂರಿ

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ(Kolkata): ಮನುಷ್ಯ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕ್ರೂರಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ಕಾಲದಲ್ಲಿ ಕೊಲೆ ಅಂದರೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದರು. ಈಗ ಕೊಲೆ ಅನ್ನೋದು ಸಾಮಾನ್ಯವಾಗಿದ್ದು, ಅದರಲ್ಲೂ ತುಂಬಾ ಕ್ರೌರ್ಯದ ರೀತಿಯಲ್ಲಿಯೂ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಬಸಂತಿ ಎಂಬಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಹತ್ಯೆ ಮಾಡಿ ಆಕೆಯ ರುಂಡದೊಂದಿಗೆ ಪೊಲೀಸ್ ಠಾಣೆಗೆ ನಡೆದುಕೊಂಡು ಬಂದಿರುವ ದೃಶ್ಯ ವೈರಲ್ ಆಗಿದೆ. ಶನಿವಾರ ಮುಂಜಾನೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.

ಬಿಮಲ್ ಮಂಡಲ್ ಅನ್ನೋ ವ್ಯಕ್ತಿ ಸತಿ ಮಂಡಲ್ ಅನ್ನೋ ಮಹಿಳೆಯನ್ನು ಹತ್ಯೆ ಮಾಡಿ ಇಷ್ಟೊಂದು ಭೀಕರವಾಗಿ ನಡೆದುಕೊಂಡಿದ್ದಾನೆ. ಹೊಲದಲ್ಲಿ ಇವರಿಬ್ಬರ ನಡುವೆ ಜಗಳ ನಡೆದಿದ್ದು, ಏಕಾಏಕಿ ಮಹಿಳೆಯ ಮೇಲೆ ಆರೋಪಿ ಬಿಮಲ್ ಮಂಡಲ್ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋ ನೋಡಿದವರ ಎದೆ ಝಲ್ ಎನ್ನುತ್ತೆ. ಅಲ್ಲಿನ ಕಾನೂನು ಸುವ್ಯವಸ್ಥೆ ಎಷ್ಟೊಂದು ಹೆದಗೆಟ್ಟಿದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST