LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಪಾನ್ ವಿರುದ್ಧ 2 ರನ್ ಗಳಿಂದ ಗೆದ್ದ ಭಾರತ

ಪ್ರಜಾಸ್ತ್ರ ಸುದ್ದಿ

ಸನೊ(ಜಪಾನ್): ಭಾರತ ಹಾಗೂ ಜಪಾನ್ ವಿರುದ್ಧದ ಏಕೈಕ ಟಿ-20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಟೀಂ 2 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಳೆಯಿಂದಾಗಿ ಪಂದ್ಯವನ್ನು 5 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಜಪಾನ್ ಪಡೆಯ ಅದ್ಭುತ್ ಬೌಲಿಂಗ್ ನಿಂದಾಗಿ 4 ವಿಕೆಟ್ ನಷ್ಟಕ್ಕೆ ಕೇವಲ 32 ರನ್ ಗಳಿಸಿತು.

ನಾಯಕ ಶ್ರೇಯಸ್ ಅಯ್ಯರ್ ಗಳಿಸಿದ 16 ರನ್ ಗರಿಷ್ಠ ಸ್ಕೋರ್ ಆಗಿದೆ. ಸಂಜು ಸ್ಯಾಮ್ಸನ್ 9, ಅಭಿಷೇಕ್ ಶರ್ಮಾ 0, ಇಶಾನ್ ಕಿಶನ್ 3 ರನ್ನಿಗೆ ಔಟ್ ಆದರು. ತಿಲಕ್ ವರ್ಮಾ 1, ಶಿವಂ ದುಬೆ 0 ಅಜೇಯರಾಗಿ ಉಳಿದರು. ಜಪಾನ್ ಪರ ಚಾರ್ಲಿ ಹರಾ ಹಿಂಝೆ 2 ವಿಕೆಟ್, ಇಬ್ರಾಹಿಂ ಟಕಾಝಕಿಯಾ, ಬೆಂಜಮಿನ್ ಇಟೊ ಡೇವಿಸ್ ತಲಾ 1 ವಿಕೆಟ್ ಪಡೆದರು.

ಅಲ್ಪ ಗುರಿ ಬೆನ್ನು ಹತ್ತಿದ ಜಪಾನ್ ತಂಡ 5 ಓವರ್ ಗಳಲ್ಲಿ 3 ವಿಕೆಟ್ ಗೆ 30 ರನ್ ಗಳಿಸಿ 2 ರನ್ ಗಳಿಂದ ಸೋಲು ಅನುಭವಿಸಿತು. ನಾಯಕ ಕೆಂಡಲ್ ಫ್ಲೇಮಿಂಗ್ 12 ರನ್, ಬೆಂಜಮಿನ್ ಇಟೊ ಡೇವಿಸ್ 9 ರನ್ ಗರಿಷ್ಠ ಸ್ಕೋರ್ ಆಗಿದೆ. ಲಚ್ಲನ್ ಯಮೊಟೊ 1 ರನ್ ಗೆ ರನೌಟ್ ಆದರು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST