ಪ್ರಜಾಸ್ತ್ರ ಸುದ್ದಿ
ನಾಗೋಯಾ(Nagoya): ಏಷ್ಯನ್ ಗೇಮ್ಸ್-2026ರ ಟೂರ್ನಿಯಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್ ಪಂದ್ಯದಲ್ಲಿ ಇರಾನಿ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಂಡಿದೆ. 37-34 ಅಂತರದಿಂದ ಭಾರತ ಟೀಂ ಗೆಲುವು ದಾಖಲಿಸಿದೆ. ಇಡೀ ಪಂದ್ಯ ಸಾಕಷ್ಟು ಕುತೂಹಲದಿಂದ ಕೂಡಿತ್ತು. ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿತು.
ಭಾರತ ಮೊದಲು 22-16ರಲ್ಲಿ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಇರಾನ್ ತಂಡ ಒಂದಿಷ್ಟು ಚೇತರಿಸಿಕೊಂಡಿತು. ಆದರೂ, ಸೋಲಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಭಾರತ ಪಡೆ ತನ್ನ ಹಿಡಿತವನ್ನು ಕೊನೆಯವರೆಗೂ ಸಾಧಿಸಿಕೊಂಡು ಐತಿಹಾಸಿಕ ವಿಜಯ ದಾಖಲಿಸಿತು. ಪುರುಷರ ಕಬಡ್ಡಿ ತಂಡದ ಫೈನಲ್ ಪಂದ್ಯ ಸಹ ಭಾರತ ಹಾಗೂ ಇರಾನ್ ನಡುವೆ ನಡೆಯಲಿದೆ.


