ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶಿಕ್ಷಣದೊಂದಿಗೆ ವರದಕ್ಷಿಣೆ, ಬಾಲ್ಯವಿವಾಹ, ಬಾಲ ಕಾರ್ಮಿಕತೆ ಮೊದಲಾದ ಅನಿಷ್ಟಗಳನ್ನು ದೂರಮಾಡಿ. ಸಾಂತ್ವನ ಸಹಾಯವಾಣಿ ಕೇಂದ್ರವನ್ನು ಉತ್ತಮ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ ಕರೆ ನೀಡಿದರು.
ಸಿಂದಗಿ ನಗರದ ಚಂಡರಯ್ಯನ ಮಠದ ಬಳಿ ವಿಜಯಪುರದ ಶ್ರೀಧರಸ್ವಾಮಿ ವಿದ್ಯಾವರ್ಧಕ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಿಂದಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಪರಿವರ್ತನೆ ಹಾಗೂ ಅಭ್ಯುದಯಕ್ಕಾಗಿ ಮಹಿಳಾ ಜಾಗೃತಿಯೊಂದೇ ಮಾರ್ಗವಾಗಿದೆ. ತಮ್ಮ ಸಮಸ್ಯೆಗಳಿಗೆ ಸಿಂದಗಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಸದಾ ಸಿದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಿಬ್ಬಂದಿ ವಿದ್ಯಾ ದೇಸಾಯಿ, ವಾಣಿ ಹಿರೇಮಠ, ರೇಖಾ ಅರ್ಜುಣಗಿ, ವಿಶಾಲಾಕ್ಷಿ ಹುಲಗಬಾಳ, ಮೇಘಾ ಶುಂಠಿ, ಶಾಂತಾಬಾಯಿ ಹಿರೇಮಠ, ಮಲ್ಲಮ್ಮ ನಂದಿಕೋಲ, ಕಮಲಾ ಹಳ್ಳಿ, ಶೋಭಾ ಬಡಿಗೇರ, ಶರಣಮ್ಮ ಕುರನಳ್ಳಿ, ಜಯಶ್ರೀ ಬಡಿಗೇರ, ಗುರುಬಾಯಿ ಯರಗಲ್, ಅಂಬಿಕಾ ಕುಲಕರ್ಣಿ, ಬೋರಮ್ಮ ಕುರನಳ್ಳಿ ಭಾಗೀರಥಿ ಬಡಿಗೇರ, ಎ.ಎಚ್.ಆಶಾ ಸೇರಿದಂತೆ ಅನೇಕರು ಇದ್ದರು.



