ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಹೋರಾಟಕ್ಕೆ ತಲೆಬಾಗಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈಗ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ರಾಜೀನಾಮೆ ನೀಡಬೇಕು ಎಂದು ಇ20 ಜನತಾ ಪಾರ್ಟಿ ಆಗ್ರಹಿಸಿದೆ. ಕಾಕ್ರೋಚ್ ಜನತಾ ಪಾರ್ಟಿಯಿಂದ ಪ್ರೇರಿತವಾಗಿ ಈಗ ಇ20 ಜನತಾ ಪಾರ್ಟಿ, ಎಥೆನಾಲ್ ಮಿಶ್ರಿತ ಇಂಧನ ಬದಲಾಗಿ ಶೇಕಡ 100ರಷ್ಟು ಪೆಟ್ರೋಲ್ ನೀಡಬೇಕು. ಇಲ್ಲದಿದ್ದರೆ ನಿತಿನ್ ಗಡ್ಕರಿ ರಾಜೀನಾಮೆ ನೀಡಬೇಕು ಎನ್ನುತ್ತಿದ್ದಾರೆ.
ನಾವು ಎಥಿನಾಲ್ ಇಂಧನ ಅಥವ ಉಚಿತ ಇಂಧನ ಕೇಳುತ್ತಿಲ್ಲ. ಎಥಿನಾಲ್ ಯೋಜನೆ ರದ್ದುಗೊಳಿಸಿ ಎಂದು ಸಹ ಹೇಳುತ್ತಿಲ್ಲ. ಗ್ರಾಹಕನಿಗೆ ತನಗೆ ಬೇಕಾದ ಇಂಧನ ಆಯ್ಕೆ ಮಾಡಿಕೊಳ್ಳುವ ಹಕ್ಕಿರಬೇಕು ಎಂದು ಆಗ್ರಹಿಸಿದೆ. ಇನ್ನು ಇ20 ಜನತಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಎಕ್ಸ್ ಖಾತೆಯಲ್ಲಿ 50 ಸಾವಿರಕ್ಕೂ ಹೆಚ್ಚು ಬೆಂಬಲಗರನ್ನು ಹೊಂದಿದೆ. ಇನ್ಸ್ಟಾಗ್ರಾಮ್ ನಲ್ಲಿ 2.7ಲಕ್ಷ ಬೆಂಬಲಿಗರನ್ನು ಹೊಂದಿದೆ.



