LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಷ್ಣುವರ್ಧನ್ ಹುಟ್ಟುಹಬ್ಬ: ಅಭಿಮಾನ್ ಸ್ಟುಡಿಯೋ ಎದುರು ಫ್ಯಾನ್ಸ್ ಪ್ರತಿಭಟನೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಸಾಹಸ ಸಿಂಹ ಡಾ.ವಿಷ್ಣುವರ್ಧನ್(Vishnuvardhan) ಅವರ 74ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋಗೆ ಬಂದಿದ್ದಾರೆ. ಆದರೆ, ನಟ ಬಾಲಣ್ಣ ಅವರ ಮಕ್ಕಳು ಅಭಿಮಾನಿಗಳನ್ನು ಒಳಗೆ ಬಿಟ್ಟಿಲ್ಲ. ಕೋರ್ಟ್ ಸ್ಟೇ ಇದೆ. ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಎಂದಿದ್ದಾರೆ. ಇದರಿಂದಾಗಿ ವಿಷ್ಣುವರ್ಧನ್ ಅವರ ಫ್ಯಾನ್ಸ್ ಪ್ರತಿಭಟನೆ ನಡೆಸಿದರು.

ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಸ್ಮಾರಕದ ಬಳಿ ಪೂಜೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದರಂತೆ. ಆದರೆ, ಕೋರ್ಟ್ ತಡೆಯಾಜ್ಞೆ ಇರುವುದಿಂದ ಕೆಂಗೇರಿ ಠಾಣೆ ಪೊಲೀಸರು ಯಾರನ್ನೂ ಒಳಗೆ ಬಿಟ್ಟಿಲ್ಲ. ಹೀಗಾಗಿ ಆಕ್ರೋಶಗೊಂಡ ಅಭಿಮಾನಿಗಳು ಗೇಟ್ ಹತ್ತಿರ ಜಮಾಯಿಸಿ ಪ್ರತಿಭಟನೆ(Protest) ನಡೆಸಲು ಮುಂದಾದರು. ಅಭಿಮಾನ್ ಸ್ಟುಡಿಯೋ ಜಾಗದ ವಿವಾದ ಹಿನ್ನಲೆ ಕೋರ್ಟ್ ನಲ್ಲಿದೆ. ಸರ್ಕಾರದಿಂದ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ನಟ ವಿಷ್ಣುವರ್ಧನ್ ಬದುಕಿದ್ದಾಗಲೂ ಹಲವು ಸಮಸ್ಯೆಗಳನ್ನು ಎದುರಿಸಿದರು. ನಿಧನದ ಬಳಿಕವೂ ಅವರ ಸ್ಮಾರಕದ ಜಾಗ ವಿವಾದ ಪಡೆದುಕೊಂಡಿರುವುದು ಅಭಿಮಾನಿಗಳಲ್ಲಿ(Fans) ಬೇಸರ ಮೂಡಿಸಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST