ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): ಉಕ್ಕಿನ ಘಟಕದಲ್ಲಿ ಸೋಮವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿ 8 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅನಕಪಲ್ಲಿ ಜಿಲ್ಲೆಯ ವಿಶಾಖಪಟ್ಟಣಂಲ್ಲಿರುವ ಉಕ್ಕಿನ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಈ ವೇಳೆ 20 ಕಾರ್ಮಿಕರು ಇದ್ದರಂತೆ. ಕೆಲವರು ಸುಟ್ಟ ಗಾಯಗಳಿಂದ ಪಾರಾಗಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಟೀಲ್ ಮೆಲ್ಟ್ ಶಾಪ್ 1ರಲ್ಲಿ ಲ್ಯಾಡಲ್ ನಿಂದ ಕರಗಿದ ಲೋಹ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ನಿಜಕ್ಕೂ ಬೆಂಕಿ ಹೊತ್ತಿಕೊಂಡಿದ್ದು ಯಾವ ಕಾರಣದಿಂದ ಅನ್ನೋದು ತಿಳಿಯಲು ಪೂರ್ತಿ ತನಿಖೆಯ ಅಗತ್ಯವಿದೆ. ಘಟನೆ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ಸಂಬಂಧ ಸೂಚನೆ ನೀಡಿದ್ದಾರೆ.



