LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಬೈ ಟೀಂನಿಂದ ಹಾರ್ದಿಕ್ ಪಾಂಡ್ಯಗೆ ಗೇಟ್ ಪಾಸ್?

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಈ ಬಾರಿಯ ಐಪಿಎಲ್ ಟೂರ್ನಿಯಿಂದ ಲೀಗ್ ಪಂದ್ಯದಲ್ಲಿಯೇ ಹೊರ ಬಿದ್ದ ಮುಂಬೈ ಇಂಡಿಯನ್ಸ್ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಆಡಿದ 14 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದ ಟೂರ್ನಿಯಿಂದ ಹೊರ ಬಿದ್ದಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ನಾಯಕತ್ವ ಬದಲಾವಣೆ ಮಾಡಲು ಸಿದ್ಧತೆ ನಡೆಸಿದೆಯಂತೆ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಗೇಟ್ ಪಾಸ್ ಕೊಡುತ್ತಾರಂತೆ.

2023ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಸ್ಥಾನದಿಂದ ಕೆಳಗೆ ಇಳಿದರು. ಆಗ ಹಾರ್ದಿಕ್ ಪಾಂಡ್ಯೆಗೆ ನಾಯಕತ್ವ ಪಟ್ಟ ಕಟ್ಟಲಾಯಿತು. ಕಳೆದ ಮೂರು ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡದ ಆಟ ಯಶಸ್ವಿ ಆಗಿಲ್ಲ. ಇದಕ್ಕೆ ನಾಯಕತ್ವ ಕಾರಣವೆಂದು ಹೇಳಲಾಗುತ್ತಿದೆ. ಆಟದಿಂದಲೂ ಪಾಂಡ್ಯ ಸಕ್ಸಸ್ ಆಗಿಲ್ಲ. ಹೀಗಾಗಿ ರೋಹಿತ್ ಶರ್ಮಾ ಸೂಚಿಸಿದವರನ್ನು ಹೊಸ ಕ್ಯಾಪ್ಟನ್ ಮಾಡಲಿದೆಯಂತೆ.

ರೋಹಿತ್ ಶರ್ಮಾ ಅವರ ಆಯ್ಕೆಯಲ್ಲಿ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬೂಮ್ರಾ ಇದ್ದಾರಂತೆ. ಅದರಲ್ಲೂ ಬೂಮ್ರಾ ಪರ ಹೆಚ್ಚು ಒಲವು ಇದ್ದು, ಮುಂಬೈ ಇಂಡಿಯನ್ಸ್ ತಂಡದ ಮುಂದಿನ ನಾಯಕ ಬೌಲರ್ ಬೂಮ್ರಾ ಆಗುವ ಸಾಧ್ಯತೆಗಳಿವೆ. ಮುಂಬೈ ತಂಡದಿಂದ ಹೊರ ಬಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಾರ್ದಿಕ್ ಪಂಡ್ಯ ಸೇರಲಿದ್ದಾರಂತೆ. ಇದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST