ಪ್ರಜಾಸ್ತ್ರ ಸುದ್ದಿ
ಧರ್ಮಶಾಲಾ(Dharmshal): ಭಾರತ ಹಾಗೂ ಅಫ್ಗಾನಿಸ್ತಾನ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭನಂ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮಳೆಯ ಕಾರಣಕ್ಕೆ ಪಂದ್ಯವನ್ನು 25 ಓವರ್ ಗಳಿಗೆ ಸಿಮೀತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಅಫ್ಗನ್ ಪಡೆಯ ಆರಂಭಿಕ ಆಟಗಾರ ರಹಮನುಲ್ಲಾ ಗುರ್ಬಜ್ ಭರ್ಜರಿ ಶತಕ ಸಿಡಿಸಿದರು. 8 ಸಿಕ್ಸ್, 8 ಫೋರ್ ಗಳೊಂದಿಗೆ 51 ಬೌಲ್ ಗಳಲ್ಲಿ 102 ರನ್ ಗಳಿಸಿ ಔಟ್ ಆದರು.
ನಾಯಕ ಶಹಿದಿ 27, ಓಮರ್ಜಾಯಿ 26 ರನ್ ಗಳಿಸಿದರು. 24.5 ಓವರ್ ಗಳಲ್ಲಿ 194 ರನ್ ಗಳಿಗೆ ಆಲೌಟ್ ಆದರು. ಭಾರತ ಪರ ಗುಮೂರ್ ಬಾರ್ ಹಾಗೂ ಹರ್ಷ ದುಬೆ ತಲಾ 3 ವಿಕೆಟ್ ಪಡೆದು ಮಿಂಚಿದರು. ನಿತೀಶ್ ಕುಮಾರ್ ರೆಡ್ಡಿ ಹಾಗೂ ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದು ಸಾಥ್ ನೀಡಿದರು.
195 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ನಾಯಕ ಗಿಲ್ ಅಜೇಯ 84 ರನ್, ಇಶಾನ್ ಕಿಶನ್ 34, ಕೆ.ಎಲ್ ರಾಹುಲ್ ಅಜೇಯ 39 ರನ್ ಗಳಿಂದಾಗಿ 22.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ದಾಖಲೆ ಬರೆದ ರೋಹಿತ್ ಶರ್ಮಾ: ಇನ್ನು ಮಾಜಿ ನಾಯಕ ರೋಹಿತ್ ಶರ್ಮಾ ಅಂಗಳಕ್ಕೆ ಬರುತ್ತಿದ್ದಂತೆ ಹೊಸ ದಾಖಲೆ ಬರೆದರು. ಶನಿವಾರದ ಪಂದ್ಯ ಆಡಿದಾಗ ರೋಹಿತ್ ಶರ್ಮಾಗೆ 39 ವರ್ಷ 75 ದಿನಗಳು ಆಗಿತ್ತು. ಇದಕ್ಕೂ ಮೊದಲು ಮೊಹಿಂದರ್ ಅಮರನಾಥ್ 1989ರಲ್ಲಿ ಕೊನೆಯ ಪಂದ್ಯ ಆಡಿದಾಗ 39 ವರ್ಷ 36 ದಿನಗಳು ಆಗಿತ್ತು. ಮಹಿಳಾ ಪರ ತಂಡದಲ್ಲಿ ಜೂಲನ್ ಗೋಸ್ವಾಮಿ 39 ವರ್ಷ 303 ದಿನಗಳು ಇದ್ದಾಗ ಕೊನೆಯ ಪಂದ್ಯವಾಡಿದ್ದಾರೆ.



