ಪ್ರಜಾಸ್ತ್ರ ಸುದ್ದಿ
ಹುಕ್ಕೇರಿ(Hukkeri): ಮೆರವಣಿಗೆ ಮೂಲಕ ದುರ್ಗಾದೇವಿ ಮೂರ್ತಿಯನ್ನು ತೆಗೆದುಕೊಂಡು ಹೊರಟಿದ್ದ ವಾಹನಕ್ಕೆ ಹಿಂಬದಿಯಿಂದ ಬಂದ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಮನಗುತ್ತಿ ಹತ್ತಿರ ಭಾನುವಾರ ನಡೆದಿದೆ.
ಹಣಜ್ಯಾನಟ್ಟಿ ಗ್ರಾಮಸ್ಥರು ಬೆಳಗಾವಿಯಿಂದ ಮೂರ್ತಿಯನ್ನು ತೆಗೆದುಕೊಂಡು ಹೊರಟಿದ್ದರು. ಈ ವೇಳೆ ದುರಂತ ಸಂಭವಿಸಿದೆ. ದಾನಮ್ಮ ಜಾಗನೂರೆ, ಪ್ರಕಾಶ ವಾಸೇದಾರ, ಶಿವಪ್ಪ ಖಾನಪೂರೆ ಮೃತ ದುರ್ದೈವಿಗಳು. 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಇದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆಯಂತೆ. ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


