LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲಬುರಗಿ: ಹೊಲದಲ್ಲಿ ತರಬೇತಿ ವಿಮಾನ ಲ್ಯಾಂಡಿಂಗ್

ಪ್ರಜಾಸ್ತ್ರ ಸುದ್ದಿ

ಕಲಬುರಗಿ(Kalaburagi): ತರಬೇತಿ ವಿಮಾನವೊಂದು ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳವಾರ ಸಂಜೆ ಪಾಳಾ ಗ್ರಾಮದ ಹತ್ತಿರದಲ್ಲಿ ನಡೆದಿದೆ. ರೆಡ್ ಬರ್ಡ್ ವಿಮಾನ ತರಬೇತಿ ಸಂಸ್ಥೆಗೆ ಸೇರಿದ ವಿಮಾನ ಸಂಜೆ ಸುಮಾರು 5.45ರ ವೇಳೆ ತೊಗರಿ ಹೊಲದಲ್ಲಿ ಲ್ಯಾಂಡಿಂಗ್ ಆಗಿದೆ. ಇದರಲ್ಲಿ ಓರ್ವ ಪೈಲೆಟ್ ಹಾಗೂ ಇನ್ನೋರ್ವ ತರಬೇತಿ ಪಡೆಯುತ್ತಿದ್ದ ಕೋ ಪೈಲೆಟ್ ಇದ್ದರು.

ತರಬೇತಿ ಭಾಗವಾಗಿ ಹಾರಾಟ ನಡೆಸಲಾಗುತ್ತಿತ್ತು. ಈ ವೇಳೆ ತಾಂತ್ರಿಕ ದೋಷ ಕಂಡು ಬಂದಿದೆ. ಸಮಯಪ್ರಜ್ಞೆ ಮೆರೆದ ಸಿಬ್ಬಂದಿ ತೊಗರಿ ಹೊಲದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ತನಿಖೆ ಬಳಿಕ ತಾಂತ್ರಿಕ ದೋಷಕ್ಕೆ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST