LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೊಯ್ಸಳ ಸಾಹಿತ್ಯ ಪ್ರಶಸ್ತಿಗೆ ಕವಿ ಎಸ್.ಶಿಶಿರಂಜನ್ ಆಯ್ಕೆ

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷ, ಸಾಹಿತಿ, ನಾಟಕಕಾರ ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಎಸ್. ಶಿಶಿರಂಜನ್ (ಶಿಶಿರ) ಅವರಿಗೆ ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ನೀಡಲಾಗುವ 2026ನೇ ಸಾಲಿನ ರಾಜ್ಯ ಮಟ್ಟದ 'ಹೊಯ್ಸಳ ಸಾಹಿತ್ಯ ಪ್ರಶಸ್ತಿ' ದೊರೆತಿದೆ ಎಂದು ಪ್ರಕಾಶನದ ಸಂಸ್ಥಾಪಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.

ಹಾಸನದ ಸಂಸ್ಕೃತ ಭವನದಲ್ಲಿ ಅ.11 ರಂದು ಬೆಳಗ್ಗೆ 10 ಗಂಟೆಗೆ ಕವಯತ್ರಿ ಹಾಗೂ ಸಂಶೋಧಕಿ ಡಾ.ಹೆಚ್.ಕೆ.ಹಸೀನಾ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 'ಮಾಣಿಕ್ಯ ಕವಿ-ಕಾವ್ಯ ಸಂಭ್ರಮ'ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಯಚೂರಿನ ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ  ಡಾ.ಶಿವಾನಂದ ಕೆಳಗಿನಮನಿ ಸಮಾರಂಭ ಉದ್ಘಾಟನೆ ನೆರವೇರಿಸುವರು.

ಕನ್ನಡ ಸಾಹಿತ್ಯದ ಕಾವ್ಯ ಮತ್ತು ನಾಟಕ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಎಸ್. ಶಿಶಿರಂಜನ್ ಅವರು ಸಂವೇದನೆ, ಅವ್ವ, ಲಂಕೇಶನ ತಲೆಗಳು, ಋಣ ಸಂದಾಯವಾಗಲಿ ಒಂದಿಷ್ಟು, ನವಭಾರತ ಜನನಿಯ ತನುಜಾತೆ ಕವನ ಸಂಕಲನಗಳನ್ನು ಪ್ತಕಟಿಸಿದ್ದಾರೆ. ಇದೆಂಥಾ ದೇಶಪ್ರೇಮ ರೀ...? ಹಾಗೂ ಧರ್ಮ ಎಂಬ ನಾಟಕಗಳನ್ನು ರಚಿಸಿಸಿದ್ದಾರೆ. 'ಮರಳಿ ಬಾ ಮನಸೇ' ಎಂಬ ಭಾವಗೀತೆಗಳ ಧ್ವನಿಸುರುಳಿಯನ್ನೂ ಹೊರತಂದಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಟಿ ಸೇರಿದಂತೆ ಹಲವು ಪ್ರಮುಖ ವೇದಿಕೆಗಳಲ್ಲಿ ಕವನ ವಾಚನ ಮಾಡಿದ್ದಾರೆ. 

ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಎಸ್. ಶಿಶಿರಂಜನ್  ಅವರು, ಹಲವಾರು ನಾಟಕಗಳನ್ನು ನಿರ್ದೇಶಿಸುವ ಜೊತೆಗೆ ಅಭಿನಯವನ್ನೂ ಮಾಡಿ ಗಮನಸೆಳೆದಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಕೇಸರಿ ಹರವು, ವಿ. ನಾಗೇಂದ್ರ ಪ್ರಸಾದ್ ಅವರ ಬಳಿ ನಿರ್ದೇಶನದ ಶಿಷ್ಯವೃತ್ತಿ ಮಾಡಿರುವ ಎಸ್ ಶಿಶಿರಂಜನ್ ಅವರು ಕೆಲವು ಕಿರುಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ ಅಲ್ಲದೇ ಚಲನಚಿತ್ರ ಸಹ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ೨ ದಶಕಗಳಿಗೂ ಹೆಚ್ಚು ಕಾಲದಿಂದಲೂ ಸಕ್ರಿಯರಾಗಿರುವ ಎಸ್.ಶಿಶಿರಂಜನ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಘಟಕದಿಂದ ಕೆ.ವಿ. ರತ್ನಮ್ಮ ದತ್ತಿ ರಾಜ್ಯಪ್ರಶಸ್ತಿ, ಯುವಚೇತನ ಪ್ರಶಸ್ತಿ, ಸ್ಪಂದನಶ್ರೀ ಪ್ರಶಸ್ತಿ, ರಂಗಪ್ರತಿಭಾ ಪುರಸ್ಕಾರ, ದಸರೆಯ ಕವಿ ಪುರಸ್ಕಾರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರಾಷ್ಟ- ರಾಜ್ಯಮಟ್ಟದ ಪ್ರತಿಷ್ಟಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಿದ್ದಾರೆ . ಅವರ ಸಾಧನೆಯ ಮಕುಟಕ್ಕೆ ಮತ್ತೊಂದು ರತ್ನವಾಗಿ ರಾಜ್ಯಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿಯು ಅವರಿಗೆ ಸಲ್ಲುತ್ತಿದೆ. 

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST