ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳು ನಟ ಜಯಂ ರವಿ ಸಂಸರಾದಲ್ಲಿ ಬಿರುಕು ಮೂಡಿದೆ. ಪತ್ನಿಗೆ ಡಿವೋರ್ಸ್ ಕೊಡುವ ಹಂತಕ್ಕೆ ಬಂದಿದೆ. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಕಣ್ಣೀರು ಹಾಕಿದ್ದಾರೆ. ನಟಿಯೊಬ್ಬರ ವಿರುದ್ಧ ಕಿಡಿ ಕಾರಿದ್ದಾರೆ. ಮೂರು ಅಕ್ಷರದ ಆಕೆಯ ಹೆಸರು ಹೇಳಿದರೆ ನನ್ನ ಮೇಲೆ ಕೇಸ್ ಹಾಕಲಾಗುತ್ತೆ. 14 ವರ್ಷಗಳ ಕಾಲ ನರಕಯಾತನೆ ಅನುಭವಿಸಿದ್ದೇನೆ ಎಂದಿದ್ದಾರೆ.
ನನ್ನ ಹೆಸರಿನಲ್ಲಿ ಒಂದು ಬ್ಯಾಂಕ್ ಅಕೌಂಟ್ ಇಲ್ಲ. ಇರುವುದೆಲ್ಲ ಜಾಯಿಂಟ್ ಅಕೌಂಟ್. ಹಣ ತೆಗೆದುಕೊಳ್ಳಲು ಸಹ ಸ್ವತಂತ್ರ ಇರಲಿಲ್ಲ. ಮಕ್ಕಳನ್ನು ನೋಡಲು ಆಗುತ್ತಿಲ್ಲ. ಭೇಟಿ ಆಗಲು ಆಗುತ್ತಿಲ್ಲ. ಶಾಲೆಗೆ ಹೋದರೆ ಮಕ್ಕಳೊಂದಿಗೆ ಬಾಡಿ ಗಾರ್ಡ್ಸ್ ಇರುತ್ತಾರೆ ಎಂದು ಕಣ್ಣೀರು ಹಾಕಿದ್ದಾರೆ. ಡಿವೋರ್ಸ್ ಆಗುವ ತನಕ ಸಿನಿಮಾ ಮಾಡಲ್ಲ. ನಾನು ಶಾಂತ ಸ್ವಭಾವದವನು. ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.



