LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆ.12ರವರೆಗೆ ದರ್ಶನ್ ಅಂಡ್ ಟೀಂ ನ್ಯಾಯಾಂಗ ಬಂಧನ ವಿಸ್ತರಣೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಆಪ್ತೆ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧವನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಣೆ ಮಾಡಲಾಗಿದೆ. ಇಂದು ರಾಜ್ಯದ ಬೇರೆ ಬೇರೆ ಜೈಲುಗಳಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಎಲ್ಲರನ್ನು ನೋಡಿದ ನ್ಯಾಯಾಧೀಶರು ನ್ಯಾಯಾಂಗ ಬಂಧವನ್ನು ಸೆಪ್ಟೆಂಬರ್ 12ರ ತನಕ ವಿಸ್ತರಣೆ ಮಾಡಿದರು. ಈ ನಡುವೆ ಆರೋಪಿಗಳ ಪರ ವಕೀಲರು ಚಾರ್ಜ್ ಶೀಟ್ ಕಾಪಿ ಕೊಡುವಂತೆ ಕೋರಿದರು. ಇದಕ್ಕೆ ಕೋರ್ಟ್ ಪೊಲೀಸರಿಗೆ ಚಾರ್ಜ್ ಶೀಟ್ ನೀಡಲು ಸೂಚನೆ ನೀಡಿದೆ.

ಬಳ್ಳಾರಿ ಜೈಲಿನಿಂದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ಬೆಳಗಾವಿ ಜೈಲಿನಿಂದ ವಿನಯ್ ಸೇರಿದಂತೆ ಬೇರೆ ಬೇರೆ ಜೈಲುಗಳಲ್ಲಿರುವ ಪ್ರದೂಷ್, ನಾಗರಾಜು, ಕಾರ್ತಿಕ್, ನಂದೀಶ್, ಪುಟ್ಟಸ್ವಾಮಿ, ಜಗದೀಶ್, ರಾಘವೇಂದ್ರ, ಪವನ್, ಅನುಕುಮಾರ್, ಧನರಾಜ್, ಲಕ್ಷ್ಮಣ, ದೀಪಕ್ ಕುಮಾರ್, ಕೇಶವಮೂರ್ತಿ, ನಿಖಿಲ್ ಕುಮಾರ್, ರವಿಶಂಕರ್ ಸೇರಿದಂತೆ 17 ಆರೋಪಿಗಳಿಗೂ ಚಾರ್ಜ್ ಶೀಟ್ ಕಾಪಿ ಕೊಡಲು ಸೂಚಿಸಲಾಯಿತು. ದರ್ಶನ್ ಪರ ಖ್ಯಾತ ಹಿರಿಯ ವಕೀಲ ಸಿ.ವಿ ನಾಗೇಶ್ ಉತ್ತರಿಸಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST