LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರವಾರ: ಸೂರ್ಯೋದಯ ಹೊತ್ತಿನಲ್ಲೇ ನಡೀತು ಉದ್ಯಮಿ ಹತ್ಯೆ

ಪ್ರಜಾಸ್ತ್ರ ಸುದ್ದಿ

ಕಾರವಾರ(Karawar): ವಾರದ ಹಿಂದೆಯಷ್ಟೇ ಊರಿಗೆ ಬಂದು ಇಂದು(ಭಾನುವಾರ) ನಸುಕಿನಜಾವ ವಾಪಸ್ ಮಹಾರಾಷ್ಟ್ರಕ್ಕೆ ಹೊಗಲು ಸಜ್ಜಾಗುತ್ತಿದ್ದ ಉದ್ಯಮಿಯ(Businessman) ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಮುಂಜಾನೆ ಸುಮಾರು 5.30ರ ಸುಮಾರಿಗೆ ಹಣಕೋಣ ಗ್ರಾಮದಲ್ಲಿ ಉದ್ಯಮಿ ವಿನಾಯಕ ನಾಯ್ಕ(58) ಎಂಬುವರನ್ನು ಹತ್ಯೆ ಮಾಡಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ. ಕುಟುಂಬಸ್ಥರದಲ್ಲಿ ದುಃಖ ಮಡುಗಟ್ಟಿದೆ.

ಪುಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಹಾಗೂ ರಫ್ತು ವ್ಯವಹಾರ ಮಾಡುತ್ತಿದ್ದರು. ಪತ್ನಿಯೊಂದಿಗೆ ಊರಿಗೆ ಬಂದಿದ್ದರು. ಇಂದು ವಾಪಸ್ ಪುಣೆಗೆ ಹೋಗಲು ನಸುಕಿನಜಾವ ಸಜ್ಜಾಗುತ್ತಿದ್ದರು. ಅಷ್ಟರಲ್ಲೇ ನಾಲ್ಕೈದು ಜನರ ಗುಂಪೊಂದು ಮನೆಗೆ ನುಗ್ಗಿ ತಲ್ವಾರ್ ನಿಂದ ಹಲ್ಲೆ ಮಾಡಿ(Murder) ಹತ್ಯಗೈದಿದೆ. ಈ ವೇಳೆ ಪತ್ನಿ(Wife) ವೈಶಾಲಿ ಸಹ ಗಾಯಗೊಂಡಿದ್ದಾರೆ. ಮನೆಯಲ್ಲಿ ಇಬ್ಬರೆ ಇದ್ದರೆಂದು ತಿಳಿದು ಬಂದಿದೆ. ಚಿತ್ತಾಕುಲ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST